ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ವರದಿಯಾದ ಆಘಾತಕಾರಿ ಘಟನೆಯಲ್ಲಿ, ಬಿಜೆಪಿ ಮಾಜಿ ಕೌನ್ಸಿಲರ್ ತನ್ನ ಮೂರು ಕುಟುಂಬ ಸದಸ್ಯರೊಂದಿಗೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೀವ್ ಮಿಶ್ರಾ(45), ಅವರ ಪತ್ನಿ ನೀಲಂ ಮಿಶ್ರಾ, ಇಬ್ಬರು ಮಕ್ಕಳಾದ ಅನ್ಮೋಲ್(13) ಮತ್ತು 7 ವರ್ಷದ ಸಾರ್ಥಕ್ ಮಿಶ್ರಾ ಮೃತಪಟ್ಟವರು. ಇವರು ವಿದಿಶಾ ನಗರದ ಬಂಟಿನಗರ ನಿವಾಸಿಗಳಾಗಿದ್ದಾರೆ.
ಸಂಜೀವ್ ಮಿಶ್ರಾ ಅವರು ಬಿಜೆಪಿಯ ಮಾಜಿ ಕಾರ್ಪೊರೇಟರ್ ಆಗಿದ್ದು, ಬ್ರಾಸ್ ಮಿಲ್ ಬಳಿ ‘ಜಂತ ಭೋಜನಾಲಯ’ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರ ಸಿಕ್ಕಿದೆ. ಸಂಜೀವ್ ಅವರ ಮಗನು ‘ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ. ಇದು ಕುಟುಂಬವನ್ನು 5 ವರ್ಷಗಳಿಂದ ಚಿಂತೆಗೀಡುಮಾಡಿತ್ತು ಎಂದು ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
ಮಗನ ಅನಾರೋಗ್ಯ ಸಹಿಸಲಾಗದೆ ಕುಟುಂಬವು ತಮ್ಮ ಜೀವನವನ್ನು ಕೊನೆಗೊಳಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.