ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಸಂಸದಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
2015ರ ಜೂನ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಂಸದರಾಗಿದ್ದ ಅರುಣ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿತಿಶ್ ಕುಮಾರ್ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಬಿಹಾರದ ಜೆಹಾನಾಬಾದ್ ಜಿಲ್ಲೆಯ ವಿಶೇಷ ನ್ಯಾಯಾಲಯವು ವಿಚಾರ ನಡೆಸಿ ತೀರ್ಪು ನೀಡಿದ್ದು, ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಶನಿವಾರ ಶಿಕ್ಷೆಯನ್ನು ಘೋಷಿಸಿದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಕುಮಾರ್ ರಜಾಕ್, ಶಿಕ್ಷೆ ಪ್ರಕಟಿಸಿದರು.
ಅದೇ ಪ್ರಕರಣದಲ್ಲಿ, ಮಾಧೇಪುರದ ಮಾಜಿ ಲೋಕಸಭಾ ಸದಸ್ಯ ಪಪ್ಪು ಯಾದವ್ ವಿರುದ್ಧ ಖಚಿತವಾದ ಸಾಕ್ಷ್ಯಾಧಾರ ಇಲ್ಲದ್ದರಿಂದ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು.
ಜಾತಿ ವಿಚಾರದಲ್ಲಿ ಟೀಕೆ ಮಾಡಿದ್ದ ಅರುಣ್ ಕುಮಾರ್, ನಾವು ಬಳೆಗಳನ್ನು ಧರಿಸಿಲ್ಲ ಮತ್ತು ನಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಮುಖ್ಯಮಂತ್ರಿಯ ಎದೆ ಸೀಳುತ್ತೇವೆ ಎಂದು ಹೇಳಿದ್ದಾರೆ. ಜೆಡಿಯು ನಾಯಕಿ ಚಂದ್ರಿಕಾ ಪ್ರಸಾದ್ ಯಾದವ್ ಪ್ರಕರಣ ದಾಖಲಿಸಿದ್ದರು.