ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇಕಡ 10 ಮೀಸಲಾತಿಯನ್ನು ಕೇಂದ್ರ ಸರ್ಕಾರದಿಂದ ಘೋಷಿಸಲಾಗಿದ್ದು, ಈಗ ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಸೋಮವಾರದಂದು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಿದ್ದು ಮೂವರು ಮೀಸಲಾತಿ ಪರವಾಗಿದ್ದರೆ, ಇಬ್ಬರು ನ್ಯಾಯಾಧೀಶರು ವಿರೋಧ ವ್ಯಕ್ತಪಡಿಸಿದ್ದರು.
ಮೂವರು ನ್ಯಾಯಾಧೀಶರು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ನೀಡುವ ಸರ್ಕಾರದ ತೀರ್ಮಾನದ ಪರವಾಗಿದ್ದ ಹಿನ್ನೆಲೆಯಲ್ಲಿ ಬಹುಮತದ ಕಾರಣ ಸರ್ಕಾರದ ಆದೇಶಕ್ಕೆ ಮನ್ನಣೆ ಸಿಕ್ಕಂತಾಗಿದೆ. ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಯಾರಿಗೆ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಎಸ್ ಸಿ, ಎಸ್ ಟಿ, ಓ ಬಿ ಸಿ ಹೊರತಾದ ಸಾಮಾನ್ಯ ವರ್ಗಕ್ಕೆ ಸೇರಿದವರು ಈ ಮೀಸಲಾತಿಯನ್ನು ಪಡೆಯಲು ಅರ್ಹರಾಗಿದ್ದು, ಅಂತವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಒಳಗಿರಬೇಕಾಗುತ್ತದೆ.
ಅಲ್ಲದೆ ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವವರು ಇದಕ್ಕೆ ಅರ್ಹರಾಗಿದ್ದು, ವಾಸದ ಮನೆ ಒಂದು ಸಾವಿರ ಚದರಡಿ ಒಳಗಿರಬೇಕಾಗುತ್ತದೆ. ವಸತಿ ನಿವೇಶನ 900 ಚದರಡಿಗಿಂತ ಹೆಚ್ಚಿರಬಾರದು ಎಂದು ನಿಯಮದಲ್ಲಿ ಹೇಳಲಾಗಿದೆ.