alex Certify ಬದಲಾಗಲಿದೆಯಾ ಉದ್ಯೋಗಿಗಳ ವೇತನ ನಿಯಮ…? ಇಲ್ಲಿದೆ ಈ ಕುರಿತ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಲಿದೆಯಾ ಉದ್ಯೋಗಿಗಳ ವೇತನ ನಿಯಮ…? ಇಲ್ಲಿದೆ ಈ ಕುರಿತ ಮಹತ್ವದ ಮಾಹಿತಿ

ಹೊಸ ವೇತನ ಸಂಹಿತೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ಜಾರಿಗೆ ತರಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಇದಕ್ಕೆ ಅಡ್ಡಿಯಾದವು. ಈಗ ನಿಯಮ ಮುಂದಿನ ವರ್ಷ  ಜಾರಿಗೆ ಬರುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಎಲ್ಲಾ ರಾಜ್ಯಗಳು ತಮ್ಮ ಕರಡು ನಿಯಮಗಳನ್ನು ಸಿದ್ಧಪಡಿಸುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಹೊಸ ವೇತನ ಸಂಹಿತೆ ಜಾರಿಗೆ ಬಂದಲ್ಲಿ ಉದ್ಯೋಗಿಗಳ ಸಂಬಳ, ರಜೆ ಸೇರಿದಂತೆ ಅನೇಕ ಸಂಗತಿ ಬದಲಾಗಲಿದೆ.

ಉದ್ಯೋಗಿಗಳ ಗಳಿಕೆ ರಜೆ ಹೆಚ್ಚಾಗುವ ಸಾಧ್ಯತೆಯಿದೆ. ರಜೆ 240 ದಿನಗಳಿಂದ 300ಕ್ಕೆ ಹೆಚ್ಚಿಸಬಹುದು ಎನ್ನಲಾಗ್ತಿದೆ. ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ವೇತನ ಸಹಿತ ರಜೆ ಹೆಚ್ಚಳ ಮಾಡುವಂತೆ ಸಭೆಯಲ್ಲಿ ಸಾಕಷ್ಟು ಒತ್ತಾಯ ಕೇಳಿ ಬಂದಿದೆ.

ಹೊಸ ವೇತನ ಸಂಹಿತೆ ಅಡಿಯಲ್ಲಿ ಉದ್ಯೋಗಿಗಳ ವೇತನ ರಚನೆ ಕೂಡ ಬದಲಾಗಲಿದೆ. ಉದ್ಯೋಗಿಗಳು ಮನೆಗೆ ತೆಗೆದುಕೊಂಡು ಹೋಗುವ ಸಂಬಳ ಕಡಿಮೆಯಾಗಲಿದೆ. ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ ಶೇಕಡಾ 50 ಕ್ಕಿಂತ ಕಡಿಮೆ ಇರುವಂತಿಲ್ಲ. ಪ್ರಸ್ತುತ ಹಲವು ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡಿ ಮೇಲಿಂದ ಮೇಲೆ ಹೆಚ್ಚಿನ ಭತ್ಯೆಗಳನ್ನು ನೀಡುವುದರಿಂದ, ಕಂಪನಿಯ ಮೇಲಿನ ಹೊರೆ ಕಡಿಮೆಯಾಗಿದೆ. ಆದ್ರೆ ಹೊಸ ನಿಯಮ ಜಾರಿಗೆ ಬಂದ ಮೇಲೆ ಇದು ಸಾಧ್ಯವಿಲ್ಲ.

ಹೊಸ ವೇತನ ಸಂಹಿತೆ, ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮೇಲೆ ಮಾತ್ರವಲ್ಲ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಪರಿಣಾಮ ಬೀರಲಿದೆ. ಉದ್ಯೋಗಿಗಳ ಸಂಬಳ, ರಜಾ ದಿನ, ಕೆಲಸದ ಅವಧಿ ಎಲ್ಲವೂ ಬದಲಾಗಲಿದೆ.

ಹೊಸ ನಿಯಮದ ಪ್ರಕಾರ, ಕಂಪನಿಯು ದಿನಕ್ಕೆ 12 ಗಂಟೆಗಳ ಕೆಲಸವನ್ನು ಅಳವಡಿಸಿಕೊಂಡರೆ, ಉಳಿದ 3 ದಿನಗಳವರೆಗೆ ಉದ್ಯೋಗಿಗೆ ರಜೆ ನೀಡಬೇಕಾಗುತ್ತದೆ. ಕೆಲಸದ ಸಮಯ ಹೆಚ್ಚಾದರೆ, ಕೆಲಸದ ದಿನಗಳು 6 ರ ಬದಲು 5 ಅಥವಾ 4 ಆಗಬೇಕಾಗುತ್ತದೆ. ಇದಕ್ಕಾಗಿ, ಉದ್ಯೋಗಿ ಮತ್ತು ಕಂಪನಿಯ ನಡುವೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...