ಇವೆಕ್ಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಇವೆಕ್ಟ್ರಿಕ್ ತನ್ನ ಎಲ್ಲಾ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ರೈಸ್, ಮೈಟಿ ಮತ್ತು ರೈಡ್ ಪ್ರೊ ಹೆಸರಿನಲ್ಲಿ ಮೂರು ಸ್ಕೂಟರ್ ಬಿಡುಗಡೆ ಮಾಡಿದೆ. ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಮಾರ್ಟ್‌ನಲ್ಲಿ ಈ ವಾಹನಗಳನ್ನು ಅನಾವರಣ ಮಾಡಲಾಗಿದೆ.
ಇವೆಕ್ಟ್ರಿಕ್ ರೈಸ್ ಎಲೆಕ್ಟ್ರಿಕ್ ಬೈಕ್ 3.0 ಕೆಡಬ್ಯುಆರ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಇದನ್ನು 120 ಕಿಮೀ ವರೆಗೆ ಓಡಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 100 ಕಿಲೋಮೀಟರ್.
ಇವೆಕ್ಟ್ರಿಕ್ ಇ-ಮೋಟರ್ ಸೈಕಲ್ ಹೊರತಾಗಿ ಇವೆಕ್ಟ್ರಿಕ್ ಮೋಟಾರ್ಸ್ ಮೈಟಿ ಮತ್ತು ರೈಡ್ ಪ್ರೊ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಹ ಬಿಡುಗಡೆ ಮಾಡಿದೆ. ರೈಡ್ ಪ್ರೊ ಒಂದು ಹೈ-ಸ್ಪೀಡ್ ಇ-ಸ್ಕೂಟರ್ ಆಗಿದ್ದು, ಗಂಟೆಗೆ 75 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಒಂದೇ ಚಾರ್ಜ್‌ನಲ್ಲಿ 90 ಕಿಲೋಮೀಟರ್ ಚಲಿಸುತ್ತದೆ. ಈ ಕಂಪನಿಯು ದೇಶಾದ್ಯಂತ 70 ಕ್ಕೂ ಹೆಚ್ಚು ವಿತರಕರನ್ನು ಹೊಂದಿದೆ. ವರ್ಷದ ಅಂತ್ಯದ ವೇಳೆಗೆ, ಕಂಪನಿಯು ವಿತರಕರ ಸಂಖ್ಯೆಯನ್ನು 150 ಪಾಯಿಂಟ್‌ಗಳಿಗೆ ವಿಸ್ತರಿಸುವ ಪ್ಲಾನ್ ಮಾಡಿದೆ.