ಕೆಲಸ ಹುಡುಕಾಟ ಸಂದರ್ಭದಲ್ಲಿ ನೆರವಾಗುವ ಸ್ನೇಹಿತರು ಬಹುಕಾಲ ನೆನಪಲ್ಲಿ ಉಳಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಪ್ರತಿಯೊಬ್ಬರಿಗೂ ಸ್ನೇಹಿತರ ನೆರವು ಸಿಕ್ಕಿರುತ್ತದೆ.
ಲಿಂಕ್ಡ್ಇನ್ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸ್ಫೂರ್ತಿ ನೀಡಲು ಅನೇಕರು ಧನಾತ್ಮಕ ವಿಷಯದ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರವಿನಾ ಮೋರ್ ಎಂಬ ಮಹಿಳೆ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ.
ಜುಲೈ 04, 1985 ರ ತನ್ನ ತಂದೆಯ ಕೆಲಸದ ಅರ್ಜಿಯನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ತಂದೆಯ ಆತ್ಮೀಯ ಸ್ನೇಹಿತ ತನ್ನ ತಂದೆಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡಲು ಅರ್ಜಿ ಬರೆದುಕೊಟ್ಟು ನೆರವಾಗಿದ್ದರು ಎಂದು ಉಲ್ಲೇಖಿಸಿದ್ದಾರೆ.
ಉದ್ದವಾದ ಪೋಸ್ಟ್ನಲ್ಲಿ, ಆಕೆಯ ತಂದೆ 80ರ ದಶಕದಲ್ಲಿ ಪದವಿ ಪಡೆದರು ಮತ್ತು ಫ್ರೆಶರ್ ಆಗಿ, ಅವರು ರೆಸ್ಯೂಮ್ ಅನ್ನು ಡ್ರಾಫ್ಟ್ ಮಾಡಲು ಮತ್ತು ಅರ್ಜಿ ಬರೆಯಲು ತಲೆಕೆಡಿಸಿಕೊಂಡಿದ್ದರು.
ಆದರೆ, ಅವರ ಆತ್ಮೀಯ ಸ್ನೇಹಿತ ಪ್ರಕಾಶ್ ಅಂಕಲ್, ಸುಂದರವಾದ ಕೈ ಬರಹದಲ್ಲಿ ಇಂಗ್ಲಿಷ್ನಲ್ಲಿ ಅರ್ಜಿ ಬರೆದುಕೊಟ್ಟಿದ್ದರು. 10 ಅಜಿರ್ಗಳನ್ನು ಬರೆಯುವುದರಿಂದ ಹಿಡಿದು ನನ್ನ ತಂದೆಯನ್ನು ಡ್ರೆಸ್ಸಿಂಗ್ ಮಾಡಲು ಮತ್ತು ಸಂದರ್ಶನಗಳಲ್ಲಿ ಯಾವ ರೀತಿ ಮಾತನಾಡಬೇಕೆಂದು ನೆರವಾಗಿದ್ದರು ಎಂದು ವಿವರಿಸಿದ್ದಾರೆ
ತನ್ನ ತಂದೆ ತಪ್ಪುಗಳನ್ನು ಮಾಡುತ್ತಲೇ ಇದ್ದರು, ಆ ತಪ್ಪುಗಳನ್ನು ಅವರ ಗೆಳೆಯ ಎಂದಿಗೂ ಗಂಭೀರವಾಗಿ ಪರಿಗಣಿಸದೇ ಮತ್ತು ನಿರಂತರವಾಗಿ ತನ್ನ ತಂದೆಯನ್ನು ಪ್ರೋತ್ಸಾಹಿಸಿದ್ದರು ಎಂದು ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಅವರ ಪ್ರಯತ್ನಗಳಿಗೆ ಧನ್ಯವಾದಗಳು, ನನ್ನ ತಂದೆ ಉತ್ತಮ ವೃತ್ತಿ ಜೀವನವನ್ನು ಹೊಂದಿದ್ದರು ಮತ್ತು ಮುಂದಿನ ವಾರ ನಿವೃತ್ತರಾಗಲಿದ್ದಾರೆ. ಪ್ರಕಾಶ್ ಅಂಕಲ್ ಇನ್ನೂ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಲಭ್ಯವಿಲ್ಲದಿದ್ದ ಸಮಯದಲ್ಲಿ, ರೆಸ್ಯೂಮ್ಗಳನ್ನು ಕೈಯಿಂದ ಬರೆಯಲಾಗುತ್ತಿತ್ತು. ತಮ್ಮ ತಂದೆಗೆ ಅವರ ಆತ್ಮೀಯ ಸ್ನೇಹಿತರು ರೆಸ್ಯೂಮ್ ಬರೆದುಕೊಟ್ಟಿದ್ದರು ಎಂದು ರವಿನಾ ಉಲ್ಲೇಖಿಸಿದ್ದಾರೆ.