ಬೆಂಗಳೂರು : ಸಿಎಂ, ಡಿಸಿಎಂ ಸ್ಥಾನ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಿಎಂ, ಡಿಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವ ವಿಚಾರಕ್ಕೆ ವಿಪಕ್ಷಗಳ ಟೀಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮಗಳ ಮುಂದೆ ಕೇಳಿದ್ರೆ ಆಗಲ್ಲ ಎಂದಿದ್ದಾರೆ. ನಮ್ಮ ಅಭಿಪ್ರಾಯವನ್ನ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ರೀತಿ ಮಾಡಿದ್ರೆ ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ? ಎಲ್ಲವನ್ನೂ ಬೀದಿಯಲ್ಲಿ ಚರ್ಚೆ ಮಾಡಬಾರದು, ಹೈಕಮಾಂಡ್ ಮುಂದೆ ಹೋಗಿ ಕೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.