alex Certify SHOCKING: ದಾಖಲೆ ವೇಗದಲ್ಲಿ ಸವೆಯುತ್ತಿದೆ ಮೌಂಟ್ ಎವರೆಸ್ಟ್‌ನ ನೀರ್ಗಲ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ದಾಖಲೆ ವೇಗದಲ್ಲಿ ಸವೆಯುತ್ತಿದೆ ಮೌಂಟ್ ಎವರೆಸ್ಟ್‌ನ ನೀರ್ಗಲ್ಲು

ಭೂಮಿ ಮೇಲಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ತುದಿಯಲ್ಲಿರುವ ಹಿಮಗಲ್ಲು ಈ ಶತಮಾನದ ಮಧ್ಯದ ವೇಳೆಗೆ ಕಾಣೆಯಾಗಲಿದೆ ಎಂದು ನೇಪಾಳದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. 2,000 ವರ್ಷಗಳಷ್ಟು ಹಳೆಯದಾದ ಈ ನೀರ್ಗಲ್ಲು ಭಾರೀ ವೇಗವಾಗಿ ತೆಳ್ಳಗಾಗುತ್ತಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇಂಟರ್ನ್ಯಾಷನಲ್ ಸೆಂಟರ್‌ ಫಾರ್‌ ಇಂಟಿಗ್ರೇಟೆಡ್ ಮೌಂಟೆನ್ ಡೆವಲಪ್ಮೆಂಟ್ (ಐಸಿಐಎಂಓಡಿ), 1990ರ ದಶಕದಿಂದಲೂ ಎವರೆಸ್ಟ್‌ ತೀವ್ರಗತಿಯಲ್ಲಿ ತನ್ನ ಮಂಜಿನ ಹೊದಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದೆ. ಸಂಸ್ಥೆಯು ನಡೆಸಿದ ವೈಜ್ಞಾನಿಕ ಅಧ್ಯಯನದಲ್ಲಿ ಎಂಟು ದೇಶಗಳ ವಿಜ್ಞಾನಿಗಳು ಹಾಗೂ ನೇಪಾಳದ 17 ತಜ್ಞರು ಈ ಪರ್ವತದ ಮಂಜಿನ ಹೊದಿಕೆ ಹಾಗೂ ಪರಸರವನ್ನು ಅವಲೋಕನ ಮಾಡಿದ್ದಾರೆ.

ಸಮುದ್ರ ಮಟ್ಟದಿಂದ 8,020 ಮೀಟರ್‌ ಮೇಲಿರುವ ಸೌತ್‌ ಕಾಲ್ ನೀರ್ಗಲ್ಲು ಪ್ರತಿ ವರ್ಷ ಎರಡು ಮೀಟರ್‌ನಂತೆ ತೆಳ್ಳಗಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಎವರೆಸ್ಟ್‌ನ ನೇಪಾಳದ ಭಾಗದಲ್ಲಿರುವ ಸೌತ್‌ ಕಾಲ್ ನೀರ್ಗಲ್ಲಿನ ಸ್ಯಾಂಪಲ್ ಒಂದನ್ನು ಪಡೆದು ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಇದೇ ಜಾಗದಲ್ಲಿ ಜಗತ್ತಿನ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಹವಾಮಾನ ಕೇಂದ್ರಗಳು ಇದ್ದು, ಅವುಗಳು ಕ್ರಮವಾಗಿ 7,945ಮೀ ಮತ್ತು 8,430ಮೀ ಎತ್ತರದಲ್ಲಿವೆ. ಈ ಕೇಂದ್ರಗಳಿಂದಲೂ ಸಹ ಮಾಹಿತಿಯನ್ನು ಅಧ್ಯಯನಕ್ಕೆ ಬಳಸಲಾಗಿದೆ.

ರೇಡಿಯೋ ಕಾರ್ಬನ್ ಡೇಟಿಂಗ್ ಮೂಲಕ ಈ ನೀರ್ಗಲ್ಲು ಸುಮಾರು 2,000 ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ತಿಳಿಸುತ್ತಾರೆ. ಇಷ್ಟು ಮಂದವಾದ ನೀರ್ಗಲ್ಲು ಸೃಷ್ಟಿಯಾಗಲು ತೆಗೆದುಕೊಂಡ ಅವಧಿಯ 80 ಪಟ್ಟು ವೇಗದಲ್ಲಿ ನೀರ್ಗಲ್ಲು ಸವೆಯುತ್ತಾ ಸಾಗಿದೆ ಎಂದು ಅಧ್ಯಯನ ವರದಿ ತಿಳಿಸುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...