ನೌಕರಿ ಸಿಗೋದು ಸುಲಭವಲ್ಲ. ವಿದ್ಯಾಭ್ಯಾಸಕ್ಕೆ ತಕ್ಕ ನೌಕರಿ ಎಲ್ಲರಿಗೂ ಸಿಗೋದಿಲ್ಲ. ಕೆಲ ವ್ಯಾಪಾರಕ್ಕೆ ವಿದ್ಯಾಭ್ಯಾಸದ ಅಗತ್ಯವಿರುವುದಿಲ್ಲ. ಸುಲಭವಾಗಿ ವ್ಯಾಪಾರ ಶುರು ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು.
ಈ ಸಾಲಿನಲ್ಲಿ ಮೊದಲು ಬರೋದು ಹಾಲಿನ ವ್ಯವಹಾರ. 30 ಸಾವಿರಕ್ಕೆ ಉತ್ತಮ ಹಸು, 50-60 ಸಾವಿರಕ್ಕೆ ಉತ್ತಮ ಎಮ್ಮೆಯನ್ನು ನೀವು ಖರೀದಿ ಮಾಡಬಹುದು. ಆರಂಭದಲ್ಲಿ ಒಂದು ಅಥವಾ ಎರಡು ಹಸುಗಳಿಂದಲೇ ವ್ಯಾಪಾರ ಶುರು ಮಾಡಬಹುದು. ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ನೀವು ಮಾರಾಟ ಮಾಡಿ ಆದಾಯ ಗಳಿಸಬಹುದು.
ಹೂಗಳಿಗೆ ಯಾವಾಗ್ಲೂ ಬೇಡಿಕೆಯಿದೆ. ಸ್ವಲ್ಪ ಭೂಮಿಯನ್ನು ನೀವು ಗುತ್ತಿಗೆ ಪಡೆದು ಹೂ-ಗಿಡಗಳನ್ನು ಬೆಳೆಸಬಹುದು. ಹೂಗಳನ್ನು ಆನ್ಲೈನ್ ನಲ್ಲಿ ಕೂಡ ನೀವು ಮಾರಾಟ ಮಾಡಬಹುದು.
ಮರಗಳನ್ನು ಬೆಳೆಸುವ ಮೂಲಕ ಕೂಡ ಗಳಿಕೆ ಮಾಡಬಹುದು. ಯಾವ ಮರ ಬೆಳೆಸಿದ್ರೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಯಾವ ಮಣ್ಣಿನಲ್ಲಿ ಯಾವ ಗಿಡ ಉತ್ತಮವಾಗಿ ಬೆಳೆಯುತ್ತದೆ ಎಂಬ ಬಗ್ಗೆ ಮಾಹಿತಿ ಪಡೆದು, ತರಬೇತಿ ತೆಗೆದುಕೊಂಡು ಗಿಡ ಬೆಳೆಸಿದ್ರೆ ಲಾಭಕರ. ತೇಗದ ಮರ, ರೋಸ್ವುಡ್, ರಬ್ಬರ್, ಬೀಟೆ ಹೀಗೆ ಅನೇಕ ಮರಗಳನ್ನು ಬೆಳೆಸಬಹುದು.
ಜೇನು ವ್ಯವಹಾರ ಕೂಡ ಲಾಭಕರ. ವೃತ್ತಿಯ ರೂಪದಲ್ಲಿ ಇದನ್ನು ಪ್ರಾರಂಭಿಸಿದ್ರೆ ಸಾಕಷ್ಟು ಹಣ ಗಳಿಸಬಹುದು. ಒಂದರಿಂದ ಒಂದೂವರೆ ಲಕ್ಷದಲ್ಲಿ ಈ ವ್ಯವಹಾರ ಶುರು ಮಾಡಬಹುದು.
ಭತ್ತ, ಗೋಧಿಯನ್ನು ಅನೇಕರು ಬೆಳೆಯುತ್ತಾರೆ. ಆದ್ರೆ ತರಕಾರಿ ಬೆಳೆ ಲಾಭ ತರುವ ಕೃಷಿ. ಸಣ್ಣ ಜಮೀನಿನಲ್ಲಿಯೇ ಅನೇಕ ತರಕಾರಿಗಳನ್ನು ಬೆಳೆಯಬಹುದು. ಮೆಣಸಿನಕಾಯಿ, ಎಲೆಕೋಸು, ಟೊಮೊಟೊ ಮುಂತಾದ ತರಕಾರಿಗಳನ್ನು ಬೆಳೆದು ಅದನ್ನು ಮಾರಾಟ ಮಾಡಬಹುದು.