
ಮಳೆಗಾಲದಲ್ಲಿ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ತಲೆಯಿಂದ ಪಾದದವರೆಗೆ ದೇಹದ ಪ್ರತಿಯೊಂದು ಭಾಗಕ್ಕೂ ಹೆಚ್ಚಿನ ಆರೈಕೆ ಬೇಕಾಗುತ್ತದೆ.
ಬಿಸಿಲ ಧಗೆ ಮಳೆಗಾಲದಲ್ಲಿರುವುದಿಲ್ಲ ನಿಜ. ಆದ್ರೆ ಮಳೆಗಾಲದಲ್ಲಿಯೂ ಸನ್ಸ್ಕ್ರೀನ್ ಹಚ್ಚಿಕೊಳ್ಳುವುದು ಅವಶ್ಯ.
ಮಳೆಗಾಲದಲ್ಲಿ ತುಟಿಗಳ ಆರೈಕೆ ಮಾಡಬೇಕಾಗುತ್ತದೆ. ಬಹಳ ಸಮಯ ತುಟಿಗಳಿಗೆ ಏನೂ ಹಚ್ಚದಿದ್ದಲ್ಲಿ ತುಟಿ ಒಡೆಯುತ್ತದೆ. ಇಲ್ಲ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಆಗಾಗ ವ್ಯಾಸಲೀನ್ ಹಚ್ಚಿಕೊಳ್ಳುವುದು ಒಳ್ಳೆಯದು.
ಪ್ರತಿ ಬಾರಿ ತಲೆ ಸ್ನಾನ ಮಾಡಿದ ನಂತ್ರ ಒಣಗಿರುವ ಕಾಟನ್ ಬಟ್ಟೆಯಲ್ಲಿ ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಿ. ಒಣ ಕೂದಲಿನ ಸಮಸ್ಯೆ ಇರುವವರು ಮಿನಿ ಡೀಪ್ ಕಂಡೀಷನರ್ ಬಳಸಿ. ಅದನ್ನು ಹಚ್ಚಿ 20 ನಿಮಿಷ ಬಿಡಿ.
ಕಣ್ಣಿನ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ಕಲೆಯನ್ನು ತಪ್ಪಿಸಲು ಐ ಕ್ರೀಂ ಹಚ್ಚಿಕೊಳ್ಳಿ. ಸಮಯಕ್ಕೆ ಸರಿಯಾಗಿ ಐ ಬ್ರೋ ಮಾಡಿಸಿಕೊಳ್ಳುತ್ತಿರಿ.
ಮಳೆಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಕಾಲುಗಳು ಒದ್ದೆಯಾಗುವುದರಿಂದ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಬೆರಳುಗಳ ಮಧ್ಯೆ ಇರುವ ಚರ್ಮ ಕೆಲವರಿಗೆ ಕೊಳೆಯುತ್ತದೆ. ಹಾಗಾಗಿ ಮಳೆಗಾಲದ ನೀರು ತಾಗದಂತೆ ಶೂ ಧರಿಸುವುದು ಒಳಿತು. ಆದ್ರೆ ಒದ್ದೆಯಾದ ಶೂವನ್ನು ಬಹಳ ಹೊತ್ತು ಹಾಕಿಕೊಳ್ಳಬೇಡಿ.
ಪರ್ಫ್ಯೂಮ್ ಗೆ ಸ್ವಲ್ಪ ವ್ಯಾಸಲೀನ್ ಸೇರಿಸಿ, ಕೈ, ಕುತ್ತಿಗೆ ಹಾಗೂ ಕಿವಿಯ ಹಿಂದೆ ಹಚ್ಚಿಕೊಳ್ಳಿ. ಇದರಿಂದ ಸೆಂಟ್ ವಾಸನೆ ದೂರದವರೆಗೆ ಬರುವುದಲ್ಲದೇ, ಬೆವರಿನ ವಾಸನೆ ಬರುವುದಿಲ್ಲ.