alex Certify ಕೋಟಿಗಟ್ಟಲೆ ಗಳಿಸಿದ್ರೂ ಕಟ್ಟಬೇಕಾಗಿಲ್ಲ ತೆರಿಗೆ; ಭಾರತದ ಈ ರಾಜ್ಯದಲ್ಲಿ ಪಾನ್ ಕಾರ್ಡ್‌ನಿಂದಲೂ ವಿನಾಯಿತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿಗಟ್ಟಲೆ ಗಳಿಸಿದ್ರೂ ಕಟ್ಟಬೇಕಾಗಿಲ್ಲ ತೆರಿಗೆ; ಭಾರತದ ಈ ರಾಜ್ಯದಲ್ಲಿ ಪಾನ್ ಕಾರ್ಡ್‌ನಿಂದಲೂ ವಿನಾಯಿತಿ…..!

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಸಮೀಪಿಸುತ್ತಿದ್ದಂತೆ ತೆರಿಗೆದಾರರಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತದ ಬಗ್ಗೆ ಯಾವುದೇ ಘೋಷಣೆ ಮಾಡದೇ ಇರುವುದು ತೆರಿಗೆದಾರರಲ್ಲಿ ನಿರಾಸೆ ಸಹ ಮೂಡಿಸಿದೆ. ತಮ್ಮ ಆದಾಯದ ಮೇಲೆ ಭಾರೀ ತೆರಿಗೆ ಪಾವತಿಸುವವರಿಗೆ ಜುಲೈ 31 ನಿರ್ಣಾಯಕ ದಿನ. ಗಡುವಿನ ಮೊದಲು ತೆರಿಗೆ ಪಾವತಿಸದಿದ್ದರೆ ದಂಡ ಸಹ ಕಟ್ಟಬೇಕಾಗಬಹುದು. ಆದಾಯ ತೆರಿಗೆಯ ಭೂತವು ಉದ್ಯೋಗಸ್ಥರನ್ನು ಅದರಲ್ಲೂ ಮಧ್ಯಮ ವರ್ಗವನ್ನು ಹೆಚ್ಚಾಗಿ ಕಾಡುತ್ತದೆ. ಆದರೆ ಭಾರತದಲ್ಲಿ ಒಂದೇ ಒಂದು ರೂಪಾಯಿ ಕೂಡ ತೆರಿಗೆ ಪಾವತಿಸದ ರಾಜ್ಯವೊಂದಿದೆ.

ತೆರಿಗೆಯೇ ಇಲ್ಲದ ರಾಜ್ಯ…!

ಭಾರತದ ಈ ರಾಜ್ಯದಲ್ಲಿ ಜನರು ಒಂದೇ ಒಂದು ರೂಪಾಯಿ ತೆರಿಗೆಯನ್ನೂ ಪಾವತಿಸಬೇಕಾಗಿಲ್ಲ. ಕೋಟಿಗಟ್ಟಲೆ ಸಂಪಾದಿಸಿದರೂ ಆದಾಯ ತೆರಿಗೆ ಇಲಾಖೆ ಜನರಿಂದ ತೆರಿಗೆಯನ್ನು ಸಂಗ್ರಹಿಸುವುದಿಲ್ಲ. ಈ ರಾಜ್ಯದ ಜನರ ಆದಾಯ ತೆರಿಗೆ ಮುಕ್ತವಾಗಿದೆ. ಭಾರತದಲ್ಲಿ ತೆರಿಗೆ ಮುಕ್ತ ರಾಜ್ಯ ಎಂದು ಹೆಸರಾಗಿರುವುದು ಸಿಕ್ಕಿಂ. ಸಿಕ್ಕಿಂನಲ್ಲಿ ವಾಸಿಸುವ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಸಿಕ್ಕಿಂನ ಜನರನ್ನು ಭಾರತೀಯ ಸಂವಿಧಾನದ 372 (ಎಫ್) ವಿಧಿ ಅಡಿಯಲ್ಲಿ ಆದಾಯ ತೆರಿಗೆಯಿಂದ ಹೊರಗಿಡಲಾಗಿದೆ.

ಸಿಕ್ಕಿಂ ಜನರೇಕೆ ತೆರಿಗೆ ಪಾವತಿಸಬೇಕಿಲ್ಲ?

ಸಿಕ್ಕಿಂನ ಜನರಿಗೆ ತೆರಿಗೆ ಮುಕ್ತ ಸೌಲಭ್ಯವೇಕೆ ಅನ್ನೋ ಪ್ರಶ್ನೆ ಸಹಜ. ಸಿಕ್ಕಿಂ ಅನ್ನು 1975 ರಲ್ಲಿ ಭಾರತದಲ್ಲಿ ವಿಲೀನಗೊಳಿಸಲಾಯಿತು. ವಿಲೀನದ ಸಮಯದಲ್ಲಿ ಸಿಕ್ಕಿಂ ಕೆಲವು ಷರತ್ತುಗಳನ್ನು ಹಾಕಿತ್ತು. ಸಿಕ್ಕಿಂ ತನ್ನ ಹಳೆಯ ಕಾನೂನುಗಳು ಮತ್ತು ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳುವ ಷರತ್ತಿನ ಮೇಲೆ ಭಾರತವನ್ನು ಸೇರಿಕೊಂಡಿದೆ. ಈ ಷರತ್ತುಗಳನ್ನು ವಿಲೀನದ ಸಮಯದಲ್ಲಿ ಅಂಗೀಕರಿಸಲಾಯಿತು. ಇದರಿಂದಾಗಿ ಸಿಕ್ಕಿಂನ ಮೂಲ ನಿವಾಸಿಗಳನ್ನು ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 10 (26AAA) ಅಡಿಯಲ್ಲಿ ಆದಾಯ ತೆರಿಗೆಯಿಂದ ಹೊರಗಿಡಲಾಗಿದೆ.

ಪಾನ್ ಕಾರ್ಡ್ ಅಗತ್ಯವಿಲ್ಲ!

ಸಿಕ್ಕಿಂ ಭಾರತದೊಂದಿಗೆ ವಿಲೀನಗೊಳ್ಳುವ ಮೊದಲು ಅಲ್ಲಿ ನೆಲೆಸಿರುವವರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(26AAA) ಅಡಿಯಲ್ಲಿ ವಿನಾಯಿತಿ ಪಡೆದಿದ್ದರು. ಹಾಗಾಗಿ ಅವರು ತೆರಿಗೆ ಪಾವತಿಸಬೇಕಾಗಿಲ್ಲ. ಆದಾಯ ತೆರಿಗೆ ಮಾತ್ರವಲ್ಲ, ಅಲ್ಲಿನ ಜನರಿಗೆ ಪ್ಯಾನ್ ಕಾರ್ಡ್ ಕೂಡ ಅಗತ್ಯವಿಲ್ಲ. ಹೂಡಿಕೆ ಮಾಡಲು ಸಿಕ್ಕಿಂ ನಿವಾಸಿಗಳಿಗೆ ಕಡ್ಡಾಯ ಪ್ಯಾನ್ ಕಾರ್ಡ್‌ನಿಂದ ಸೆಬಿ ವಿನಾಯಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...