alex Certify ಪ್ರತಿದಿನ 8 ಕೋಟಿಯಂತೆ 600 ವರ್ಷ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ ಈ ವ್ಯಕ್ತಿಯ ಹಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 8 ಕೋಟಿಯಂತೆ 600 ವರ್ಷ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ ಈ ವ್ಯಕ್ತಿಯ ಹಣ….!

ಕಳೆದ ಕೆಲವು ವರ್ಷಗಳಿಂದೀಚೆಗೆ ವಿಶ್ವದ ಐವರು ಶ್ರೀಮಂತರ ಸಂಪತ್ತು ವೇಗವಾಗಿ ಹೆಚ್ಚುತ್ತಿದೆ. ಸಿರಿವಂತರು ಮತ್ತು ಬಡವರ ನಡುವಿನ ಅಂತರ ಕೂಡ ಜಾಸ್ತಿಯಾಗುತ್ತಲೇ ಇದೆ. ಸುಮಾರು 5 ಬಿಲಿಯನ್‌ಗಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ವಿಶ್ವದ ಅಗ್ರಗಣ್ಯ ಶ್ರೀಮಂತರು ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ

ಅಂಕಿ-ಅಂಶಗಳ ಪ್ರಕಾರ 2020ರಿಂದ ಇಲ್ಲಿಯವರೆಗೆ ವಿಶ್ವದ ಐವರು ಶ್ರೀಮಂತ ವ್ಯಕ್ತಿಗಳಾದ ಎಲೋನ್ ಮಸ್ಕ್, ಬರ್ನಾರ್ಡ್ ಅರ್ನಾಲ್ಟ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಮತ್ತು ಮಾರ್ಕ್ ಜುಕರ್‌ಬರ್ಗ್ ಅವರ ಸಂಪತ್ತು ಪ್ರತಿ ಗಂಟೆಗೆ 14 ಮಿಲಿಯನ್ ಡಾಲರ್‌ಗಳಷ್ಟು ಅಂದರೆ 116 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಈ ಬಿಲಿಯನೇರ್‌ಗಳ ಸಂಪತ್ತು 869 ಬಿಲಿಯನ್ ಡಾಲರ್ ದಾಟಿದೆ.

ನಿತ್ಯ 8 ಕೋಟಿ ಖರ್ಚು ಮಾಡಿದರೂ 600 ವರ್ಷಗಳವರೆಗೂ ಹಣ ಖಾಲಿಯಾಗುವುದಿಲ್ಲ !

ಎಲ್ಲಾ ಬಿಲಿಯನೇರ್‌ಗಳ ಸಂಪತ್ತಿನ ಡೇಟಾವನ್ನು ಒಟ್ಟುಗೂಡಿಸಿದ್ರೆ ಈ ಪೈಕಿ ಎಲೋನ್ ಮಸ್ಕ್ ಪ್ರತಿದಿನ 1 ಮಿಲಿಯನ್ ಡಾಲರ್‌ಗಳನ್ನು ಅಂದರೆ 8 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ ಅವರ  ಸಂಪೂರ್ಣ ಆಸ್ತಿ ಖಾಲಿಯಾಗಲು 673 ವರ್ಷಗಳೇ ಬೇಕು. ಆದರೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಪ್ರತಿದಿನ 8 ಕೋಟಿ ಹಣವನ್ನು 450 ವರ್ಷಗಳಿಗಿಂತ ಹೆಚ್ಚು ಸಮಯ ಖರ್ಚು ಮಾಡಬಹುದು. ಮುಂದಿನ ಕೆಲವು ವರ್ಷಗಳಲ್ಲಿ ಪ್ರಪಂಚವು 1000 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನ ಮೊದಲ ಮಾಲೀಕನನ್ನು ಪಡೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶ್ರೀಮಂತರು ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಅಂತರ

ವಿಶ್ವದ ಶ್ರೀಮಂತರು ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಅಂತರ ನಿಜಕ್ಕೂ ಕಳವಳಕಾರಿಯಾಗಿದೆ. ವಿಶ್ವದಾದ್ಯಂತ ಸರ್ಕಾರಗಳು ಖಾಸಗಿ ವಲಯವನ್ನು ಉತ್ತಮವಾಗಿ ನಿಯಂತ್ರಿಸುವ ಅಗತ್ಯವಿದೆ ಎಂಬುದು ತಜ್ಞರ ಅಭಿಪ್ರಾಯ. ಇದು ಭವಿಷ್ಯದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...