ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ 60ರ ಹರೆಯದಲ್ಲೂ ಬಹಳ ಫಿಟ್ ಆಗಿದ್ದಾರೆ, ಅವರ ಸೌಂದರ್ಯ ಕೂಡ ಕೊಂಚವೂ ಮಾಸಿಲ್ಲ. ಬಿಡುವಿಲ್ಲದ ಕೆಲಸದ ನಡುವೆಯೂ ನೀತಾ ಅಂಬಾನಿ ತಮ್ಮ ಫಿಟ್‌ನೆಸ್‌ನೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಕ್ರಮಬದ್ಧ ಆಹಾರವನ್ನು ಸೇವನೆ ಮಾಡುತ್ತಾರೆ. ನೀತಾ ಅಂಬಾನಿ ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರಂತೆ. ಕೋಟ್ಯಾಧೀಶೆಯಾದರೂ ಕೇವಲ 50 ರೂಪಾಯಿ ಮೌಲ್ಯದ ಈ ಜ್ಯೂಸ್ ಅನ್ನು ನೀತಾ ಅಂಬಾನಿ ಆಯ್ಕೆ ಮಾಡಿಕೊಂಡಿರುವುದೇಕೆ? ಇದರಲ್ಲಿ ಅಂಥದ್ದೇನಿದೆ ಅನ್ನೋದನ್ನು ನೋಡೋಣ.
ರಕ್ತದೊತ್ತಡ ನಿಯಂತ್ರಣ
ಬೀಟ್ರೂಟ್ನಲ್ಲಿರುವ ನೈಟ್ರೇಟ್‌ಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬೀಟ್ರೂಟ್ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಬಿಪಿ ನಿಯಂತ್ರಿಸಬಹುದು.
ಹೃದಯದ ಆರೋಗ್ಯ
ಬೀಟ್‌ರೂಟ್‌ನಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ನೈಟ್ರೇಟ್‌ಗಳು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಅಂಶಗಳು ರಕ್ತದ ಹರಿವನ್ನು ಸುಧಾರಿಸುತ್ತವೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ.
ರಕ್ತಹೀನತೆ ನಿವಾರಣೆ
ಬೀಟ್‌ರೂಟ್‌ನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ ರಸವು ರಕ್ತಹೀನತೆ ಇರುವ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ
ಬೀಟ್ರೂಟ್ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಹಾಗಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.
ತ್ರಾಣವನ್ನು ಹೆಚ್ಚಿಸುತ್ತದೆ
ಬೀಟ್ರೂಟ್‌ನಲ್ಲಿರುವ ನೈಟ್ರೇಟ್ ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ದೇಹದಲ್ಲಿ ತ್ರಾಣ ಹೆಚ್ಚಾಗುತ್ತದೆ. ಬೀಟ್ರೂಟ್ ರಸವು ಕ್ರೀಡಾಪಟುಗಳು ಮತ್ತು ಜಿಮ್‌ನಲ್ಲಿ ವ್ಯಾಯಾಮ ಮಾಡುವವರಿಗೆ ಸಹಕಾರಿ.