ಒಂದು ನೀರಿನ ಬಾಟಲ್ ಬೆಲೆ ಎಷ್ಟಿರಬಹುದು ಹೇಳಿ ಅಬ್ಬಬ್ಬಾ ಅಂದ್ರೆ 50-100 ರೂಪಾಯಿ. ಯಾರಾದ್ರೂ 850 ರೂಪಾಯಿ ಒಂದು ನೀರಿನ ಬಾಟಲ್ ಬೆಲೆ ಅಂದ್ರೆ ಸಾಕು. ಅದು ನೀರಲ್ಲ ಅಮೃತ ಅಂತ ಹೇಳೋರೆ ಹೆಚ್ಚು.
ಅಷ್ಟು ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ. ಹೀಗಂತ ಹೇಳಿದ್ದು ಗೋವಾ ಕೃಷಿ ಸಚಿವ ರವಿ ನಾಯ್ಕ್.
ಇತ್ತೀಚೆಗೆ ಅಮಿತ್ ಶಾ ಗೋವಾಗೆ ಭೇಟಿ ಕೊಟ್ಟ ವೇಳೆ ಅವರಿಗೆ ಇದೇ ಕಾಸ್ಟ್ಲಿಯಸ್ಟ್ ನೀರಿನ ಬಾಟಲ್‌ನ್ನ ಕೊಡಲಾಗಿತ್ತು. ಇದು ಹಿಮಾಲಯ ಬ್ರಾಂಡ್ ಹೊಂದಿರೋವಂತಹ ನೀರಿನ ಬಾಟಲ್ ಆಗಿದೆ. ಇದೇ ಕಾರಣಕ್ಕೆ ಈ ಬಾಟಲ್ ನೀರಿನ ಬೆಲೆ ಇಷ್ಟು ದುಬಾರಿ.
ಫೆಬ್ರವರಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ, ಇದೇ ಹಿಮಾಲಯ ಬ್ರಾಂಡ್ ನೀರು ಬೇಕು ಅಂತ ಹೇಳಿದ್ದರು. ಆದ ಕಾರಣ ಇದನ್ನ 15ಕಿಲೋ ಮೀಟರ್ ದೂರದ ಪಣಜಿಯಿಂದ ತರಿಸಲಾಗಿತ್ತು. ಇಂದು ನೀರಿನ ಬೆಲೆ ಇಷ್ಟು ದುಬಾರಿಯಾಗಿರೋದು ನಿಜಕ್ಕೂ ಬೇಸರದ ವಿಷಯ. ಮುಂದಿನ ದಿನಗಳಲ್ಲಿ ನೀರಿನ ಬೆಲೆ ಬಂಗಾರ, ವಜ್ರದಷ್ಟು ಬೆಲೆಬಾಳಿದರೂ ಅಚ್ಚರಿ ಇಲ್ಲ ಅಂತ ರವಿ ನಾಯ್ಕ್ ಇದೇ ಸಂದರ್ಭದಲ್ಲಿ ಹೇಳಿದರು.