ಪ್ರಪಂಚದ ಎಲ್ಲಾ ದೇಶಗಳನ್ನ ಒಮಿಕ್ರಾನ್ ರೂಪಾಂತರ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಈ ಮ್ಯೂಟೇಟೆಡ್ ವೈರಸ್ ಭಾಗಶಃ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಹೊಸ ಅಲೆಗೆ ಕಾರಣವಾಗಿದೆ. ಹೀಗಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಒಮಿಕ್ರಾನ್ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ. ಆದರೆ ಈ ಮಧ್ಯೆ, ಈ ರೂಪಾಂತರವು ಕೊರೋನಾ ವೈರಸ್‌ನ ಕೊನೆಯ ರೂಪಾಂತರವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇಂತಹ ರೂಪಾಂತರಗಳನ್ನು ಭವಿಷ್ಯದಲ್ಲಿಯೂ ಕಾಣಬಹುದು. ಆರಂಭಿಕ ಸೋಂಕಿನಿಂದಾಗಿ, ಈ ವೈರಸ್ ರೂಪಾಂತರಗೊಳ್ಳುವ ಅವಕಾಶವನ್ನು ಪಡೆಯುತ್ತದೆ, ಲಸಿಕೆ ಇದ್ದರೂ, ಸ್ವಾಭಾವಿಕವಾಗಿ ರೋಗ ನಿರೋಧಕ ಶಕ್ತಿ ಕಂಡುಬಂದರೂ, ಜನರು ಸೋಂಕಿತರಾಗುತ್ತಲೆ ಇದ್ದಾರೆ. ಇದರರ್ಥ ಈ ವೈರಸ್ ಹೆಚ್ಚು ಹೆಚ್ಚು ಜನರಲ್ಲಿ ಬೆಳೆಯಬಹುದು. ಮುಂದಿನ ರೂಪಾಂತರವು ಹೇಗಿರುತ್ತದೆ ಅಥವಾ ಅದು ಸಾಂಕ್ರಾಮಿಕ ರೋಗವನ್ನು ಹೇಗೆ ರೂಪಿಸಬಹುದು ಎಂದು ನಮಗೆ ತಿಳಿದಿಲ್ಲ. ಆದರೆ ಒಮಿಕ್ರಾನ್ ಈಗ ಇಡೀ ವಿಶ್ವದಲ್ಲಿ ಹರಡಿದೆ. ಪ್ರಸ್ತುತ ಲಸಿಕೆ ಒಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೂ ಬೇರೆ ಉಪಾಯವಿಲ್ಲ, ಎಂದಿರುವ ತಜ್ಞರು ಕೊರೋನಾ ಲಸಿಕೆಯನ್ನು ಮುಂದುವರಿಸಲು ಮನವಿ ಮಾಡಿದ್ದಾರೆ.
ವೇಗವಾಗಿ ಹರಡುತ್ತಿರುವ, ಒಮಿಕ್ರಾನ್ ಹೆಚ್ಚಿನ ರೂಪಾಂತರಗಳನ್ನು ರಚಿಸಲು ಅವಕಾಶವನ್ನು ಹೊಂದಿರುತ್ತದೆ, ಇದರಿಂದಾಗಿ ಹೆಚ್ಚಿನ ರೂಪಾಂತರಗಳು ರೂಪುಗೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ. ನವೆಂಬರ್ ಮಧ್ಯದಲ್ಲಿ ರೂಪಾಂತರದ ಆಗಮನದಿಂದ, ಪ್ರಪಂಚದಾದ್ಯಂತ ವೈರಸ್ ಕಾಡ್ಗಿಚ್ಚಿನಂತೆ ಹರಡಿದೆ. ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಒಮಿಕ್ರಾನ್ ನಾಲ್ಕು ಪಟ್ಟು ವೇಗವಾಗಿ ಹರಡುತ್ತದೆ ಎಂದು ಬೋಸ್ಟನ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲಿಯೊನಾರ್ಡೊ ಮಾರ್ಟಿನಸ್ ಹೇಳಿದ್ದಾರೆ.
ಒಮಿಕ್ರಾನ್ ರೂಪಾಂತರದ ವೇಗವು ಹೆಚ್ಚುತ್ತಲೇ ಸಾಗುತ್ತಿದ್ದು, ಲಸಿಕೆಯನ್ನು ತೆಗೆದುಕೊಂಡ ಜನರಲ್ಲೂ ಸೋಂಕು ತಗುಲಿದೆ. ಇದಲ್ಲದೆ, ಈ ರೂಪಾಂತರವು ಲಸಿಕೆ ರಕ್ಷಣೆಯನ್ನು ಹೊಂದಿರದ ಜನರ ಮೇಲೂ ದಾಳಿ ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜನವರಿ 3 ಮತ್ತು 9 ರ ನಡುವೆ, ವಿಶ್ವಾದ್ಯಂತ ಸುಮಾರು 1.5 ಕೋಟಿ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ವಾರಕ್ಕಿಂತ 55 ಶೇಕಡಾ ಹೆಚ್ಚಾಗಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಸ್ಟುವರ್ಟ್ ಕ್ಯಾಂಪ್ಬೆಲ್ ಅವರು ದೀರ್ಘಕಾಲದ ಸೋಂಕಿನಿಂದಾಗಿ, ಹೊಸ ರೂಪಾಂತರಗಳು ಉದ್ಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.