ಭಾರತದಲ್ಲಿ ಲೀಥಿಯಂ ಬ್ಯಾಟರಿಗಳ ಉತ್ಪಾದನೆ ಆರಂಭವಾದರೆ ಎಲೆಕ್ಟ್ರಿಕಲ್ ವಾಹನಗಳ (ಇವಿ) ದರವು ಪ್ರಸ್ತುತ ಬೆಲೆಗಳಿಗೆ ಹೋಲಿಸಿದರೆ ಅರ್ಧಕ್ಕೆ ಇಳಿಯುತ್ತದೆ ಎಂದು ಗೋವಾದ ವಿದ್ಯುತ್ ಸಚಿವ ಸುದಿನ್ ಧವಲಿಕರ್ ಹೇಳಿದ್ದಾರೆ.
ಎಲೆಕ್ಟ್ರಿಕಲ್ ವಾಹನಗಳ ಮಾಲೀಕರಿಗೆ ಸಬ್ಸಿಡಿ ವಿತರಿಸಿದ ನಂತರ ಮಾತನಾಡಿದ ಅವರು, ಮುಂದಿನ ಎರಡು ವಾರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಒಮ್ಮೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದರೆ ಜನರು ಯಾವುದೇ ರೀತಿಯ ವಾಹನಗಳನ್ನು ಚಾರ್ಜ್ ಮಾಡಲು ಸುಲಭವಾಗುತ್ತದೆ ಎಂದರು.
ಲೀಥಿಯಂ ಬ್ಯಾಟರಿಗಳು ಭಾರತದಲ್ಲಿ ತಯಾರಾಗುವುದಿಲ್ಲ. ಇಲ್ಲಿ ಬ್ಯಾಟರಿಗಳನ್ನು ತಯಾರಿಸಿದಾಗ, ಇವಿಗಳ ದರಗಳು ಕಡಿಮೆಯಾಗುತ್ತವೆ ಎಂದು ಧವಲಿಕರ್ ಹೇಳಿದರು.
ಸಚಿವರ ಪ್ರಕಾರ ಆರಂಭದಲ್ಲಿ ಬೇರೆ ದೇಶಗಳಿಂದ ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುವಾಗ ಅವುಗಳ ಬೆಲೆ ಹೆಚ್ಚಾಗಿತ್ತು. ಆದರೆ ದೇಶದಲ್ಲಿ ತಯಾರಾದ ನಂತರ ಮೊಬೈಲ್ ದರ ಕಡಿಮೆಯಾಗಿದೆ. ಅದರಂತೆಯೇ ಭಾರತದಲ್ಲಿ ಲೀಥಿಯಂ ಬ್ಯಾಟರಿಗಳನ್ನು ತಯಾರಿಸಿದ ನಂತರ ಇವಿಗಳ ಬೆಲೆ ಅರ್ಧದಷ್ಟು ಇಳಿಯುತ್ತದೆ ಎಂದು ಅವರು ಹೇಳಿದರು.