ಪೆಟ್ರೋಲ್ ಪಂಪ್ ಪರವಾನಿಗೆಯ ಹೊಸ ನಿಯಮಗಳ ಅನುಸಾರ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರುವ ಮುನ್ನವೇ ಇವಿ ಚಾರ್ಜಿಂಗ್ ಹಾಗೂ ಸಿಎನ್‌ಜಿ ಔಟ್‌ಲೆಟ್‌ಗಳನ್ನು ತೆರೆಯಲು ಅವಕಾಶ ಕೊಡುತ್ತೇವೆ ಎಂದು ಸರ್ಕಾರ ತಿಳಿಸಿದೆ.
ಈ ರಾಶಿಯವರ ಕಲಾವಿದರಿಗೆ ಇದೆ ಇಂದು ಉತ್ತಮ ಅವಕಾಶ
ಪೆಟ್ರೋಲ್ ಪಂಪ್‌ಗಳ ಸ್ಥಾಪನೆಗೆ ಇದ್ದ ನಿಯಮಗಳಲ್ಲಿ ಸಡಿಲಿಕೆ ತಂದು ಪೆಟ್ರೋಲಿಯಮ್ ಮತ್ತು ಸ್ವಾಭಾವಿಕ ಅನಿಲ ಸಚಿವಾಲಯ, ನವೆಂಬರ್ 8, 2019ರ ತನ್ನ ಆದೇಶದಲ್ಲಿ; ಪೆಟ್ರೋಲ್ ಮತ್ತು ಡೀಸೆಲ್‌ಗಳ ಮಾರಾಟದೊಂದಿಗೆ ಪರ್ಯಾಯ ಇಂಧನಗಳಾದ ಸಿಎನ್‌ಜಿ, ಎಲ್‌ಎನ್‌ಜಿ ಅಥವಾ ಎಲೆಕ್ಟ್ರಿಕ್ ವಾಹನದ ಜಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸಲು ಅವಕಾಶ ಕೊಟ್ಟಿದೆ.
ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..?
ಆದರೆ ಈ ಯಾವುದನ್ನೂ ಕಡ್ಡಾಯವಾಗಿ ಮಾಡಬೇಕೆಂದು ಆದೇಶದಲ್ಲಿ ಸಚಿವಾಲಯ ತಿಳಿಸಿಲ್ಲ.
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಹಾಗೂ ಪರ್ಯಾಯ ಇಂಧನಗಳಲ್ಲಿ ಚಲಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನದ ವಿವಿಧ ಮೂಲಗಳ ಪೂರೈಕೆ ಮಾಡಲು ಎಲ್ಲೆಡೆ ಬಗೆ ಬಗೆಯ ಸರ್ವೀಸ್ ಸ್ಟೇಷನ್‌ಗಳು ತಲೆಯೆತ್ತುತ್ತಿವೆ.