
ರಷ್ಯಾ ವಿರುದ್ಧ ಯುರೋಪ್ ಒಕ್ಕೂಟ ತಿರುಗಿಬಿದ್ದಿದೆ. ರಷ್ಯಾದ ಸೆಂಟ್ರಲ್ ಬ್ಯಾಂಕ್ ವಹಿವಾಟುಗಳಿಗೆ ನಿಷೇಧ ಹೇರಲಾಗಿದೆ. ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 450 ಮಿಲಿಯನ್ ಯುರೋ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುವುದು.
ಯುಕೆ ಪ್ರಧಾನಿ ಮತ್ತು ಪೊಲೀಷ್ ಅಧ್ಯಕ್ಷರ ಜೊತೆಗೆ ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ ಸ್ಕಿ ಚರ್ಚೆ ನಡೆಸಿದ್ದಾರೆ. ಸದ್ಯದ ಭದ್ರತಾ ಪರಿಸ್ಥಿತಿಯ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಆಕ್ರಮಣಕಾರರನ್ನು ಎದುರಿಸಲು ಜಂಟಿ ಕ್ರಮಗಳಿಗೆ ಮನವಿ ಮಾಡಿದ್ದಾರೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಪೊಲೀಸ್ ಅಧ್ಯಕ್ಷ ದುಡಾ ಜೊತೆಗೆ ಚರ್ಚೆ ನಡೆಸಿದ ಝೆಲೆನ್ಸ್ ಸ್ಕಿ ನೆರವಿಗೆ ಮನವಿ ಮಾಡಿದ್ದು, ಒಪ್ಪಿಗೆ ನೀಡಿದ್ದಾರೆ.
ಉಕ್ರೇನ್ 200 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. 15 ಸಾವಿರಕ್ಕೂ ಅಧಿಕ ಜನ ದೇಶ ತೊರೆದಿದ್ದಾರೆ. ನೆರೆಯ ದೇಶಗಳಾದ ಪೋಲೆಂಡ್ ಮೊದಲಾದ ದೇಶಗಳಿಗೆ 15 ಸಾವಿರಕ್ಕೂ ಹೆಚ್ಚು ಜನ ಪಲಾಯನ ಮಾಡಿದ್ದಾರೆ.
ಬ್ರಿಟಿಷ್ ತೈಲ ಕಂಪನಿ ರಷ್ಯಾಗೆ ದೊಡ್ಡ ಹೊಡೆತ ನೀಡಿದೆ. 19.7 5ರಷ್ಟು ಷೇರುಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದೆ. ರಾಷ್ನೆಫ್ನಿ ಕಂಪನಿಯಿಂದ ಷೇರು ಪಡೆಯುವುದಾಗಿ ಬ್ರಿಟಿಷ್ ಪೆಟ್ರೋಲಿಯಂ ತೈಲ ಕಂಪನಿ ತಿಳಿಸಿದೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷರ ಜೊತೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಚರ್ಚೆ ನಡೆಸಿದ್ದಾರೆ. ರಕ್ಷಣಾ, ಹಣಕಾಸು ನೆರವು ಕೋರಿದ್ದಾರೆ. ಯುರೋಪ್ ಒಕ್ಕೂಟದಿಂದ ಬೆಂಬಲಕ್ಕೆ ಮನವಿ ಮಾಡಿದ್ದಾರೆ.