ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಮತ್ತಷ್ಟು ನಿರ್ಬಂಧ ಹೇರಲಾಗಿದೆ.
ರಷ್ಯಾ ದೇಶದ ಮೇಲೆ 5 ನೇ ಸುತ್ತಿನ ನಿರ್ಬಂಧ ಹೇರಲಾಗಿದೆ. ಕಲ್ಲಿದ್ದಲು, ಇಂಧನ ನಿರ್ಬಂಧ ಹೇರಲಾಗಿದ್ದು, ಯುರೋಪಿಯನ್ ಒಕ್ಕೂಟದ ಬಂದರುಗಳಲ್ಲಿ ರಷ್ಯಾದ ಹಡಗುಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಯುರೋಪಿಯನ್ ಒಕ್ಕೂಟ ಕಲ್ಲಿದ್ದಲುಗಾಗಿ ರಷ್ಯಾಕ್ಕೆ ದಿನಕ್ಕೆ 20 ಮಿಲಿಯನ್ ಡಾಲರ್ ಪಾವತಿಸುತ್ತದೆ. ತೈಲ ಮತ್ತು ಅನಿಲಕ್ಕಾಗಿ ದಿನಕ್ಕೆ 850 ಮಿಲಿಯನ್ ಡಾಲರ್ ನೀಡುತ್ತದೆ.
ಪ್ರಮುಖ ಇಂಧನ ಉದ್ಯಮದ ಮೇಲಿನ ಮೊದಲ ನಿರ್ಬಂಧಗಳಲ್ಲಿ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ರಷ್ಯಾದ ಕಲ್ಲಿದ್ದಲನ್ನು ನಿಷೇಧಿಸಲು ಒಪ್ಪಿಕೊಂಡಿವೆ, ಆದರೆ ತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಹೆಚ್ಚು ನಿರ್ಬಂಧ ಹೇರಲು 27 ದೇಶಗಳು ಮೀನಾಮೇಷ ಎಣಿಸುತ್ತಿವೆ. ನಿರ್ಬಂಧದಿಂದ ರಷ್ಯಾಗೆ ದೊಡ್ಡ ಪೆಟ್ಟು ಬೀಳಿದ್ದು, ಆರ್ಥಿಕ ಹಿಂಜರಿತ ಉಂಟು ಮಾಡುತ್ತದೆ. ಕಲ್ಲಿದ್ದಲು ನಿಷೇಧದಿಂದ ರಷ್ಯಾಕ್ಕೆ ವರ್ಷಕ್ಕೆ 4 ಶತಕೋಟಿ ಯುರೋಗಳಷ್ಟು (4.4 ಶತಕೋಟಿ ಡಾಲರ್) ನಷ್ಟವಾಗಲಿದೆ ಎನ್ನಲಾಗಿದೆ.