ಡಿಸೆಂಬರ್ ತಿಂಗಳು ಶುರುವಾಗಿದೆ. 2021 ಮುಗಿದು 2022ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಜನರು ಪಟ್ಟಿ ಮಾಡ್ತಿದ್ದಾರೆ. ಕೆಟ್ಟ ಹವ್ಯಾಸ ಬಿಟ್ಟು ಹೊಸ ಹವ್ಯಾಸ ಶುರು ಮಾಡುವ ತಯಾರಿಯಲ್ಲಿದ್ದಾರೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಪ್ಲಾನ್ ಮಾಡ್ತಿದ್ದರೆ, ಕೆಲ ತಪ್ಪುಗಳನ್ನು ಮಾಡಬೇಡಿ. ನೀವು ಮಾಡುವ ತಪ್ಪುಗಳು, ನಿಮ್ಮ ಹೊಸ ವರ್ಷದ ಸಂತೋಷವನ್ನು ಹಾಳು ಮಾಡುತ್ತವೆ. ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.
ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ ಮನೆಯ ವಾತಾವರಣ ಬಹಳ ಮುಖ್ಯ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬೇಕು. ನಕಾರಾತ್ಮಕ ಶಕ್ತಿ ತುಂಬಿರುವ ವಸ್ತುಗಳನ್ನು ಮನೆಯಿಂದ ಹೊರ ಹಾಕಬೇಕು. ಮನೆಯಲ್ಲಿರುವ ಒಡೆದ ಗಾಜು ಅಥವಾ ಹಾಳಾದ ಗಾಜಿನ ವಸ್ತುಗಳನ್ನು ತಕ್ಷಣ ಮನೆಯಿಂದ ಹೊರ ಹಾಕಿ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಗೆ ಮನೆಯಲ್ಲಿ ಹಾಳಾಗಿರುವ ಪೀಠೋಪಕರಣಗಳನ್ನು ಇಡಬೇಡಿ. ಅದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮನೆಯಲ್ಲಿ ದೇವರ ಮನೆಯಿದ್ದರೆ, ನಿಯಮಿತವಾಗಿ ಮನೆಯಲ್ಲಿ ಪೂಜೆ ಮಾಡಬೇಕು. ಹಾಗೆ ಒಡೆದ, ಹಾಳಾದ ವಿಗ್ರಹಗಳನ್ನು ಬಳಸಬೇಡಿ. ಮುರಿದ, ಹಾಳಾದ ವಿಗ್ರಹ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮನೆಯಲ್ಲಿ ಒಡೆದ ಪಾತ್ರೆಗಳು ಇರದಂತೆ ನೋಡಿಕೊಳ್ಳಿ. ಒಡೆದ ಪಾತ್ರೆಗಳು, ವಾಸ್ತು ಶಾಸ್ತ್ರದಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿರುವ ಈ ವಸ್ತುಗಳು ದಿವಾಳಿಯಾಗಲು ದಾರಿ ಮಾಡಿಕೊಡುತ್ತವೆ.
ಮನೆಯ ಹೊರಗಿರುವ ಪಾದರಕ್ಷೆ ಕೂಡ ಆರ್ಥಿಕ ವೃದ್ಧಿ ಜೊತೆ ಸಂಬಂಧ ಹೊಂದಿದೆ. ಪಾದರಕ್ಷೆಗಳು ಸದಾ ಸ್ವಚ್ಛವಾಗಿರಬೇಕು. ಹರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ದುರದೃಷ್ಟ. ಇದು ಬಡತನಕ್ಕೆ ಕಾರಣವಾಗುತ್ತದೆ.
ಮನೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳು ಹಾಳಾಗಿದ್ದರೆ ಅವುಗಳನ್ನು ಹಾಗೆಯೇ ಇಡಬೇಡಿ. ಅದನ್ನು ಸರಿಪಡಿಸಿ, ಇಲ್ಲವೆ ಅದನ್ನು ಕಸಕ್ಕೆ ಹಾಕಿ. ಹಾಳಾದ ಎಲೆಕ್ಟ್ರಿಕ್ ವಸ್ತುಗಳು ಹಣದ ನಷ್ಟಕ್ಕೆ ಕಾರಣವಾಗುತ್ತವೆ.