ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು, ನೌಕರರ ಸೇವಾ ವಿವರಗಳನ್ನು ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶದ ವಿದ್ಯುನ್ಮಾನ ಸೇವಾವಹಿ -ಇಎಸ್ಆರ್ ಗೆ ವರ್ಗಾಯಿಸಲಾಗುತ್ತದೆ.
ಆರ್ಥಿಕ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಈಗಾಗಲೇ ನೇಮಕವಾದ ಮತ್ತು ಇನ್ನು ಮುಂದೆ ನೇಮಕವಾಗುವ ಎಲ್ಲಾ ನೌಕರರ ಸೇವಾ ವಿವರಗಳನ್ನು ಇಎಸ್ಆರ್ ನಲ್ಲಿ ದಾಖಲಿಸಿ ನಿರ್ವಹಿಸಲು ತಿಳಿಸಿದೆ.
ಸೇವಾ ವಹಿ ವಿಭಾಗದಲ್ಲಿ ದಾಖಲಾಗಿರುವ ಎಲ್ಲ ಸರ್ಕಾರಿ ಅಧಿಕಾರಿ, ನೌಕರರ ಮಾಹಿತಿಗಳನ್ನು ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶದ ಇಎಸ್ಆರ್ ಗೆ ವರ್ಗಾಯಿಸಲಾಗುವುದು.
2021ರ ಏಪ್ರಿಲ್ 1 ರ ನಂತರ ಸರ್ಕಾರಿ ಸೇವೆಗೆ ನೇಮಕವಾಗುವ ಎಲ್ಲಾ ಅಧಿಕಾರಿ, ನೌಕರರ ಸೇವಾ ವಹಿಯನ್ನು ಇಎಸ್ಆರ್ ನಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ದೇಶಿಸಿತ್ತು. 2022ರ ಏಪ್ರಿಲ್ 12 ರಂದು ತಾಂತ್ರಿಕ ಸಮಿತಿ ಸಭೆಯಲ್ಲಿ 2021ರ ಏಪ್ರಿಲ್ ಪೂರ್ವದಲ್ಲಿ ನೇಮಕಗೊಂಡ ಎಲ್ಲಾ ಅಧಿಕಾರಿ, ನೌಕರರ ಸೇವಾ ವಿವರಗಳನ್ನು ಕೂಡ ಇಎಸ್ಆರ್ ನಲ್ಲಿ ದಾಖಲಿಸಲು ನಿರ್ದೇಶನ ನೀಡಲಾಗಿದೆ.
ಹೀಗಾಗಿ ಈ ತಂತ್ರಾಂಶದಲ್ಲಿ 2021ರ ಪೂರ್ವದಲ್ಲಿ ಸರ್ಕಾರಿ ಸೇವೆಗೆ ನೇಮಕವಾದ ನೌಕರರ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್. -1 ರಿಂದ ಇಎಸ್ಆರ್ ಗೆ ವರ್ಗಾಯಿಸಲು ತಿಳಿಸಲಾಗಿದೆ.