
ಇಎಸ್ಐಸಿ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಅಧಿಸೂಚನೆಯ ಪ್ರಕಾರ ವಿವಿಧ ವಿಭಾಗಗಳಲ್ಲಿ ಒಟ್ಟು 3800 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ವೆಬ್ಸೈಟ್ https://www.esic.nic.in ಗೆ ಭೇಟಿ ನೀಡಬಹುದಾಗಿದೆ.
ಇಎಸ್ಐಸಿ ನೇಮಕಾತಿ : ಖಾಲಿ ಇರುವ ಹುದ್ದೆಗಳ ವಿವರ
ಉನ್ನತ ವಿಭಾಗದ ಕ್ಲರ್ಕ್ : 1700 ಹುದ್ದೆಗಳು
ಸ್ಟೆನೋಗ್ರಾಫರ್ : 160 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್ : 1930 ಹುದ್ದೆಗಳು
ಈ ಹುದ್ದೆಗೆ ಜನವರಿ 15ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು 2022ರ ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಆಸಕ್ತ ಅಭ್ಯರ್ಥಿಗಳು ಇಸಿಐಎಸ್ನ ಅಧಿಕೃತ ವೆಬ್ಸೈಟ್ https://www.esic.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.