ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ)ವು ಸುಮಾರು 93 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು, ಆಸಕ್ತಿದಾರರು ಕೂಡಲೇ ಅರ್ಜಿ ಸಲ್ಲಿಸಿ, ಉದ್ಯೋಗ ಗಿಟ್ಟಿಸಿಕೊಂಡರೆ ಕೈತುಂಬ ಸಂಬಳ ಪಡೆಯಬಹುದಾಗಿದೆ.
ಸಾಮಾಜಿಕ ಭದ್ರತಾ ಅಧಿಕಾರಿ, ಮ್ಯಾನೇಜರ್ ಜಿಆರ್-2, ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇಎಸ್‌ಐಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 12 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಹಾಗೆಯೇ, ಕಂಪ್ಯೂಟರ್ ಬಳಕೆಯ ಜ್ಞಾನ, ಕಚೇರಿ ಶಿಷ್ಟಾಚಾರಗಳನ್ನು ತಿಳಿದುಕೊಂಡಿರುವುದು ಹಾಗೂ ಡೇಟಾಬೇಸ್ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಾಗೆಯೇ, ಅಭ್ಯರ್ಥಿಯು ಯಾವುದೇ ಸರಕಾರಿ ಸಂಸ್ಥೆ, ನಿಗಮ ಅಥವಾ ಸರಕಾರದ ಅಂಡರ್‌ಟೇಕಿಂಗ್ ಇರುವ ಸಂಸ್ಥೆಗಳಲ್ಲಿ ಅಥವಾ ಬ್ಯಾಂಕ್‌ಗಳಲ್ಲಿ ಕನಿಷ್ಠ ಮೂರು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಉದ್ಯೋಗ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಗಳಿಗೆ ಏಳನೇ ವೇತನ ಆಯೋಗದಂತೆ ಮಾಸಿಕ 44,900-1,42,400 ರೂ.ವರೆಗೆ ಸಂಬಳ ನೀಡಲಾಗುತ್ತದೆ.
BIG NEWS: 76 ಕಿಮೀ ಕಡಿಮೆಯಾಗಲಿದೆ ಬೆಂಗಳೂರು –ಪುಣೆ ಅಂತರ, ಹೊಸ ಹೆದ್ದಾರಿ ನಿರ್ಮಾಣ
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು 2022ರ ಏಪ್ರಿಲ್ 12ರ ವೇಳೆಗೆ 21-27 ವರ್ಷದೊಳಗಿನವರಾಗಿರಬೇಕು. ಎಸ್‌ಸಿ, ಎಸ್‌ಟಿ, ಇಡಬ್ಲ್ಯೂಎಸ್, ಇಲಾಖಾ ಅಭ್ಯರ್ಥಿಗಳು, ಹೆಣ್ಣುಮಕ್ಕಳು, ಸೇವೆಯಿಂದ ನಿವೃತ್ತರಾದವರು 250 ರೂ. ಶುಲ್ಕ ಪಾವತಿಸಬೇಕು. ಉಳಿದವರು 500 ರೂ. ಶುಲ್ಕ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇಎಸ್‌ಐಸಿ ಸರಕಾರದ ಉತ್ತಮ ಸಂಸ್ಥೆಯಾಗಿದ್ದು, ಇವುಗಳಲ್ಲಿಉದ್ಯೋಗ ಗಿಟ್ಟಿಸಿಕೊಳ್ಳುವುದು ಬಹುತೇಕರ ಕನಸಾಗಿರುತ್ತದೆ. ಮತ್ತಿನ್ನೇಕೆ ತಡ, ಕೂಡಲೇ ಅರ್ಜಿ ಸಲ್ಲಿಸಿ, ಉದ್ಯೋಗ ಪಡೆದು ಕೈತುಂಬ ಸಂಬಳ ಎಣಿಸಿ.