ಬೆಂಗಳೂರು: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿಗಣತಿಯ ಕರ್ನಾಟಕದ ವರದಿಯನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದ್ದಾರೆ.
ಕಳೆದ ಬಾರಿಯ ಹುಲಿ ಗಣತಿಯಲ್ಲಿ ರಾಜ್ಯದಲ್ಲಿ 404 ಹುಲಿಗಳು ಕ್ಯಾಮೆರಾ ಟ್ರ್ಯಾಪ್ ಆಗಿದ್ದವು. ಈ ಬಾರಿ 435 ಹುಲಿಗಳು ಗೋಚರಿಸಿರುವುದು ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
1972 ರಿಂದ ಭಾರತದಲ್ಲಿ ಹುಲಿಗಣತಿ ನಡೆಯುತ್ತಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೈಗೊಂಡ ಅರಣ್ಯ ಸಂರಕ್ಷಣೆ ಕ್ರಮಗಳಿಂದಾಗಿ ಅರಣ್ಯವೂ ಉಳಿದಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಿದೆ. ವಿಶ್ವಾದ್ಯಂತ ಅಳವಿನಂಚಿನಲ್ಲಿದ್ದ ಹುಲಿಗಳ ಸಂತತಿ ಭಾರತದಲ್ಲಿ ಹೆಚ್ಚಳವಾಗುತ್ತಿದೆ.
ಹುಲಿಗಣತಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಂತಾರಾಷ್ಟ್ರೀಯ ಹುಲಿ ದಿನದ ಸಂದರ್ಭದಲ್ಲಿ ಎಲ್ಲಾ ವನ್ಯಜೀವಿ ಮತ್ತು ಪರಿಸರ ಪ್ರಿಯರಿಗೂ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.