ಬೆಳಗಾವಿ: ಕಾಡಾನೆಗಳು ಹಿಂಡು ಹಿಂಡಾಗಿ ಜನವಸತಿ ಪ್ರದೇಶಗಳಿಗೆ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಯಲು ಆನೆ ಕಾರ್ಯ ಪಡೆ, ಕ್ಷಿಪ್ರ ಸ್ಪಂದನ ತಂಡ ಮತ್ತು ಹಿಮ್ಮೆಟಿಸುವ ಶಿಬಿರ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಾಹಿತಿ ನೀಡಿದ ಅವರು, ಈ ತಂಡಗಳು ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸಿ, ಆನೆಗಳ ಚಲನವಲನಗಳ ಮಾಹಿತಿ ನೀಡಿ, ಧ್ವನಿವರ್ಧಗಳ ಮೂಲಕ ಎಚ್ಚರಿಸುತ್ತಿವೆ ಎಂದು ಹೇಳಿದ್ದಾರೆ.
ಕಾಡಾನೆ ಮತ್ತು ಇನ್ನಿತರ ವನ್ಯಪ್ರಾಣಿಗಳಿಂದ ಮೃತಪಟ್ಟವರಿಗೆ ಹಾಗೂ ಬೆಳೆಹಾನಿಯಾದರೆ ನಿಯಾಮನುಸಾರ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.