ಶಾಲೆಯಲ್ಲಿ ನಾಪತ್ತೆಯಾಗಿದ್ದ ಹಾವೊಂದು ಮೂರು ತಿಂಗಳ ಬಳಿಕ ಪತ್ತೆಯಾಗಿದೆ. ಅಮೆರಿಕದ ಲೂಯಿಸ್ವಿಲ್ಲೆಯಲ್ಲಿರುವ ವಾಲ್ಡೆನ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಾವು ನಿರುಪದ್ರವಿಯಾಗಿದ್ದರಿಂದ ಯಾವುದೇ ಸಮಸ್ಯೆ ತಂದೊಡ್ಡಲಿಲ್ಲ.
ವಾಲ್ಡೆನ್ ಶಾಲೆಯು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಾವು ಸಿಕ್ಕಿರುವ ಬಗ್ಗೆ ಉಲ್ಲೇಖಿಸಿದೆ. “ಸುಮಾರು 3 ತಿಂಗಳ ನಂತರ, ಮಿಸ್ಟರ್ ಹಾಪ್ಟ್ನ 5 ನೇ-6 ನೇ ತರಗತಿಯ ವಿಜ್ಞಾನ ಕೊಠಡಿಯಿಂದ ತಪ್ಪಿಸಿಕೊಂಡಿತ್ತು. ಈಗ ಅದು ಸಿಕ್ಕಿದೆ ಎಂದು ಹೇಳಲು ರೋಮಾಂಚನವಾಗುತ್ತಿದೆ. ಸೈನ್ಸ್ ರೂಮ್ ಸಿಂಕ್ ಅಡಿಯಲ್ಲಿ ಇದು ಸಿಕ್ಕಿದೆ. ಇದನ್ನು ಕಂಡುಹಿಡಿದ 6ನೇ ತರಗತಿಯ ಆಸ್ಪೆನ್ ಡಬ್ಲ್ಯೂ.ಗೆ ಧನ್ಯವಾದಗಳು ಎಂದು ಅದರಲ್ಲಿ ಬರೆಯಲಾಗಿದ್ದು, ಹಾವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ.
ಇದು ಕಾರ್ನ್ ಹಾವಾಗಿದ್ದು ನಿರುದ್ರವಿಯಾಗಿದೆ. ಶಾಂತ ಸ್ವಭಾವದಿಂದಾಗಿ ಕೆಲವರು ಇದನ್ನು ಸಾಕುತ್ತಾರೆ ಕೂಡ. ಈ ಹಾವುಗಳು ಸ್ವಾಭಾವಿಕವಾಗಿ ಒಂಟಿಯಾಗಿ ವಾಸಿಸುತ್ತವೆ. ಇವು ಯಾರಿಗೂ ಹಾನಿ ಮಾಡುವುದಿಲ್ಲ ಎನ್ನಲಾಗಿದೆ.