ಬೆಂಗಳೂರು: ಬಸ್ ಇಲ್ಲದ್ದಕ್ಕೆ 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳು ಪರದಾಟ ನಡೆಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತೆಗೌಡನ ಪಾಳ್ಯದಲ್ಲಿ ನಡೆದಿದೆ.
ಬಸ್ ವ್ಯವಸ್ಥೆ ಮಾಡಿಸುವುದಾಗಿ ಕುಮಾರ್ ಮತ್ತು ಏಜೆಂಟರು ಹಣ ಪಡೆದುಕೊಂಡಿದ್ದರು. ಅರ್ಚಕ ಮಂಜುನಾಥ್ ಅವರ ಬಳಿ ಸುಮಾರು 2 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರು. ಓಂ ಶಕ್ತಿ ಮಾಲಾಧಾರಿಗಳ ಪರವಾಗಿ ಅರ್ಚಕ ಮಂಜುನಾಥ ಹಣ ಕೊಟ್ಟಿದ್ದರು. 2 ಲಕ್ಷ ರೂಪಾಯಿ ಹಣ ಪಡೆದು ಕುಮಾರ್ ಮತ್ತು ಏಜೆಂಟರು ಎಸ್ಕೇಪ್ ಆಗಿದ್ದಾರೆ.
ಬೆಳಗ್ಗೆ 5 ಗಂಟೆಯಿಂದ ಬಸ್ ಇಲ್ಲದೆ ನೂರಾರು ಮಾಲಾಧಾರಿಗಳು ಪರದಾಟ ನಡೆಸಿದ್ದಾರೆ. ಪ್ರತಿ ಮಾಲಾ ದಾರಿಯಿಂದ 2300 ರೂಪಾಯಿ ಹಣ ವಸೂಲಿ ಮಾಡಲಾಗಿತ್ತು. ವಿಶ್ರಾಂತಿ, ಶೌಚಾಲಯ ವ್ಯವಸ್ಥೆ ಇಲ್ಲದೆ ಮಹಿಳಾ ಮಾಲಾಧಾರಿಗಳು ಪರದಾಟ ನಡೆಸಿದ್ದಾರೆ. ಮಾದನಾಯಕನ ಹಳ್ಳಿ ಠಾಣೆ ಸಮೀಪವೇ ಘಟನೆ ನಡೆದರೂ ಪೊಲೀಸರು ಮೌನ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.