
ಮೈಸೂರು: ಮದುವೆಯ ಹಿಂದಿನ ದಿನವೇ ಪ್ರೇಯಸಿಯೊಂದಿಗೆ ವರ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸುಣ್ಣದಕೇರಿ ನಿವಾಸಿಯಾಗಿರುವ ಯುವತಿಯ ಮದುವೆ ಅದೇ ಏರಿಯಾದ ಯುವಕನೊಂದಿಗೆ ನಿಶ್ಚಯವಾಗಿತ್ತು. ಬುಧವಾರ ಮಧ್ಯಾಹ್ನ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವರ ಮಂಗಳವಾರ ಪ್ರೀತಿಸಿದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ.
ಮದುವೆ ನಿಶ್ಚಯವಾಗುವ ಮೊದಲೇ ಪ್ರೀತಿಸಿದ್ದ ಯುವಕನ ಮದುವೆ ಡಿಸೆಂಬರ್ 8, 9 ರಂದು ನಿಗದಿಯಾಗಿದ್ದು, ಚಪ್ಪರ ಹಾಕುವ ವೇಳೆ ಆತನ ಪ್ರೀತಿಯ ವಿಚಾರ ಗೊತ್ತಾಗಿದೆ. ಆದರೆ, ಮದುವೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಯುವಕ ಪೋಷಕರಿಗೆ ಹೇಳಿ ಮಾರನೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ದೂರದ ಸಂಬಂಧಿಯಾಗಿದ್ದ ಯುವಕ-ಯುವತಿಯ ಮದುವೆಗೆ ಹಿರಿಯರು ಒಪ್ಪಿದ್ದು, ಆತನ ಪೂರ್ವಪರ ವಿಚಾರಿಸಿರಲಿಲ್ಲ. ಪ್ರೇಯಸಿ ಬಗ್ಗೆ ಕತೆ ಕಟ್ಟಿದ್ದ ವರ, ಆಕೆ ಹಣ ಪಡೆಯಲು ಹೀಗೆ ಮಾಡುತ್ತಿದ್ದಾಳೆ. ನೀವು ಮದುವೆಗೆ ಸಿದ್ಧತೆ ಮಾಡಿಕೊಳ್ಳಿ ಎಂದೆಲ್ಲಾ ತಿಳಿಸಿದ್ದಾನೆ. ಆತನ ಪೋಷಕರು ಹಾಗೂ ವಧವಿನ ಕಡೆಯವರು ಮದುವೆಗೆ ಸಿದ್ಧವಾಗಿದ್ದು, ಮದುವೆ ಹಿಂದಿನ ದಿನ ವರ ಪರಾರಿಯಾಗಿದ್ದಾನೆ. ಆತನ ವಿರುದ್ಧ ಕೆಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.