ಹುಬ್ಬಳ್ಳಿ: ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ಪ್ರಕರಣದ ಆರೋಪಿ ಡಿವೈಎಸ್ಪಿ ಬಂಧನ ಭೀತಿಯಿಂದ ಪರಾರಿಯಾದ ಘಟನೆ ಭಾನುವಾರ ಇಂಗಳಹಳ್ಳಿಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಮದ್ಯದ ಅಂಗಡಿ ಆರಂಭಿಸಲು ಪರವಾನಿಗೆ ನೀಡಲು ಲಂಚ ಪಡೆಯುತ್ತಿದ್ದ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದ್ದು, ಡಿವೈಎಸ್ಪಿ ರವಿ ಮರಿಗೌಡರ ಆರೋಪಿಯಾಗಿದ್ದರು. ಅವರು ದಾಳಿ ವೇಳೆ ನಾಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.
ಭಾನುವಾರ ಸ್ವಗ್ರಾಮ ಇಂಗಳಹಳ್ಳಿಗೆ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಬರುವುದು ಗೊತ್ತಾಗುತ್ತಿದ್ದಂತೆ ಊರಿಗೆ ಬಂದಿದ್ದ ರವಿ ತಮ್ಮ ಕಾರ್ ಅನ್ನು ಸ್ಥಳದಲ್ಲೇ ಬಿಟ್ಟು ಬೈಕ್ ನಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.