ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ. ಆದ್ರೆ ಇದು ಕಾನೂನುಬಾಹಿರವೂ ಅಲ್ಲ. ಹಣ ಹಾಕುವವರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಕ್ರಿಪ್ಟೋ ಕರೆನ್ಸಿ ಡಿಜಿಟಲ್ ಕರೆನ್ಸಿ. ಇದು ಯಾವುದೇ ನಿಯಂತ್ರಕವನ್ನು ಹೊಂದಿಲ್ಲ. ಯಾವ ದೇಶದಲ್ಲೂ ಯಾರೂ ಇದನ್ನು ನಿಯಂತ್ರಿಸುತ್ತಿಲ್ಲ. 2009 ರಲ್ಲಿ ಮೊದಲ ಬಾರಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗೆ ಬಂದಿದೆ. ಈಗ ವಿವಿಧ ಕ್ರಿಪ್ಟೋಕರೆನ್ಸಿಗಳು ಮಾರುಕಟ್ಟೆಯಲ್ಲಿವೆ. ಸದ್ಯ ಕ್ರಿಪ್ಟೋ ಬೆಲೆ ಭಾರಿ ಏರಿಕೆ ಕಂಡಿದೆ.
ಬೇಡಿಕೆ ಸಲ್ಲಿಸದಿದ್ದರೂ ಕ್ರೆಡಿಟ್ ಕಾರ್ಡ್ ವಿತರಣೆ…! ನಂತರ ನಡೆದಿದ್ದು ಆಘಾತಕಾರಿ ಘಟನೆ
ಕ್ರಿಪ್ಟೋಕರೆನ್ಸಿಗಳ ಬಗ್ಗೆ ಸರ್ಕಾರ ತನ್ನ ನಿರ್ಧಾರ ಮೃದುಗೊಳಿಸುವ ಸಾಧ್ಯತೆಯಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಸಂಪೂರ್ಣ ನಿಷೇಧ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವ ಸಾಧ್ಯತೆಯಿದೆ. ಆದ್ರೆ ಕ್ರಿಪ್ಟೋಕರೆನ್ಸಿಯ ವ್ಯಾಖ್ಯಾನವನ್ನು ಆರ್.ಬಿ.ಐ, ಸೆಬಿ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಕ್ರಿಪ್ಟೋ ಕರೆನ್ಸಿಗಳನ್ನು ಆಸ್ತಿಯಾಗಿ ಪರಿಗಣಿಸಲು ಆರ್.ಬಿ.ಐ ಸಿದ್ಧವಿಲ್ಲ. ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ನಿಯಂತ್ರಣ ಇರಬೇಕೆಂಬುದು ಸರ್ಕಾರದ ಅಭಿಪ್ರಾಯ. ಹಾಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗ್ತಿದೆ.
ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ನಿಯಮಗಳನ್ನು ತಯಾರಿಸಲು ಆರ್.ಬಿ.ಐ ಮತ್ತು ಸೆಬಿ ಒಟ್ಟಾಗಿ ಕೆಲಸ ಮಾಡುತ್ತಿವೆ. 2022ರ ಬಜೆಟ್‌ನಲ್ಲಿ ಅದನ್ನು ನಿಯಂತ್ರಿಸಲು ಕಾನೂನು ಜಾರಿಯಾಗುವ ಸಾಧ್ಯತೆಯಿದೆ. ವರ್ಷಾಂತ್ಯಕ್ಕೆ ಡಿಜಿಟಲ್ ಕರೆನ್ಸಿ ಮಾದರಿ ಜಾರಿಗೆ ಬರಲಿದೆ ಎಂದು ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್.ಬಿ.ಐ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್, ಭಾರತಕ್ಕೂ ಡಿಜಿಟಲ್ ಕರೆನ್ಸಿ ಅಗತ್ಯವಿದೆ ಎಂದಿದ್ದಾರೆ. ಇದು ಖಾಸಗಿ ವರ್ಚುವಲ್ ಕರೆನ್ಸಿ ಅಂದರೆ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಅಪಾಯಗಳ ವಿರುದ್ಧ ರಕ್ಷಿಸುತ್ತದೆ ಎಂದವರು ಹೇಳಿದ್ದಾರೆ.