ನವದೆಹಲಿ: 2021 ರಿಂದ ಡಿಜಿಟಲ್ ವೋಟರ್ ಐಡಿ ನೀಡಲು ಚುನಾವಣೆ ಆಯೋಗ ಸಿದ್ಧತೆ ಕೈಗೊಂಡಿದೆ. ಆಧಾರ್ ಕಾರ್ಡ್ ಮಾದರಿಯಲ್ಲಿ ಮತದಾರರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು.
ಮುಂದಿನ ವರ್ಷದಿಂದ ಡಿಜಿಟಲ್ ರೂಪದಲ್ಲಿ ಮತದಾರರಿಗೆ ನೀಡಲಾಗುವುದು. ಹೊಸ ಮತದಾರರಿಗೆ ಡಿಜಿಟಲ್ ಐಡಿ ನೀಡಲಿದ್ದು, ನಂತರ ಪರಿಶೀಲನೆ ಬಳಿಕ ಹಳೆಯ ಮತದಾರರಿಗೆ ಡಿಜಿಟಲ್ ವೋಟರ್ ಐಡಿ ನೀಡಲಾಗುವುದು. 2021 ರಲ್ಲಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವಾಗ ಮತದಾರರ ಡಿಜಿಟಲ್ ಗುರುತಿನ ಚೀಟಿ ಬಳಕೆಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.