ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಉದ್ಯೋಗಿಗಳು 7 ಲಕ್ಷ ರೂಪಾಯಿಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ ಇಪಿಎಫ್ ಒ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸ್ತಿದೆ. ಇದರ ಅಡಿಯಲ್ಲಿ ಇಪಿಎಫ್ಒ ಸಂಪೂರ್ಣ 7 ಲಕ್ಷ ರೂಪಾಯಿಗಳ ಪ್ರಯೋಜನ ನೀಡಲಿದೆ. ಇಪಿಎಫ್ಒ ಚಂದಾದಾರರಾಗಿದ್ದರೆ ಸುಲಭವಾಗಿ ಇದನ್ನು ಪಡೆಯಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಚಂದಾದಾರರಿಗೆ ಡಿಸೆಂಬರ್ 31 ರ ಮೊದಲು ಇ-ನಾಮನಿರ್ದೇಶನ ಮಾಡಲು ಸಲಹೆ ನೀಡಿದೆ. ಇ-ನಾಮನಿರ್ದೇಶನ ಮಾಡದೆ ಹೋದಲ್ಲಿ 7 ಲಕ್ಷ ರೂಪಾಯಿ ನಷ್ಟವಾಗಲಿದೆ. ನಾಮನಿರ್ದೇಶನಕ್ಕೆ ನೀವು ಕೇವಲ ಒಂದು ಫಾರ್ಮ್ ಭರ್ತಿ ಮಾಡಬೇಕು.
ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಕೆವೈಸಿ ಮಾಡಿಸದಿದ್ರೆ ಖಾತೆಯೇ ಬಂದ್
ಇಪಿಎಫ್‌ಒ ಈ ಬಗ್ಗೆ ಟ್ವೀಟ್ ಮಾಡಿದೆ. ಚಂದಾದಾರರಿಗೆ 7 ಲಕ್ಷದವರೆಗೆ ಉಚಿತ ವಿಮಾ ರಕ್ಷಣೆ ಲಭ್ಯವಿದೆ. ಸದಸ್ಯ ಮರಣ ಹೊಂದಿದ ನಂತ್ರ ವಿಮೆ ಹಣ ಪಡೆಯುವುದು ಕಷ್ಟ. ಇ-ನಾಮನಿರ್ದೇಶನವಾದ್ರೆ ಕ್ಲೈಮ್ ಸುಲಭವಾಗುತ್ತದೆ.
ಮೊದಲು ಇಪಿಎಫ್ಒ ನ ಅಧಿಕೃತ ವೆಬ್‌ಸೈಟ್ https://www.epfindia.gov.in/ ಗೆ ಭೇಟಿ ನೀಡಬೇಕು. ಅಲ್ಲಿ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ಉದ್ಯೋಗಿಗಳಿಗಾಗಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮೆಂಬರ್ UAN/ಆನ್‌ಲೈನ್ ಸೇವೆ ಮೇಲೆ ಕ್ಲಿಕ್ ಮಾಡಬೇಕು. ಯುಎಎನ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗ್ಬೇಕು.
ಇದರ ನಂತರ ಮ್ಯಾನೇಜ್ ಟ್ಯಾಬ್‌ನಲ್ಲಿ ಇ-ನಾಮನಿರ್ದೇಶನ ಆಯ್ಕೆಮಾಡಬೇಕು. ಇದರ ನಂತರ ವಿವರಗಳನ್ನು ಉಳಿಸು ಮೇಲೆ ಕ್ಲಿಕ್ ಮಾಡಿ. ಫ್ಯಾಮಿಲಿ ಡಿಕ್ಲರೇಷನ್ ಗಾಗಿ ಯಸ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಗಳ ಹೆಸರು ಸೇರಿಸಿ. ನಾಮಿನಿ ವಿವರಗಳನ್ನು ನಮೂದಿಸಿದ ನಂತರ ಉಳಿಸು ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಇಪಿಎಫ್ ನಾಮನಿರ್ದೇಶನ ಮೇಲೆ ಕ್ಲಿಕ್ ಮಾಡಿ,ಒಟಿಪಿ ರಚಿಸಿ ಇ-ಸೈನ್ ಮೇಲೆ ಕ್ಲಿಕ್ ಮಾಡಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿನ ಬರುತ್ತದೆ. ಒಟಿಪಿ ನಮೂದಿಸಿ ಸಲ್ಲಿಸಿ.