ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಚಂದಾದಾರರಿಗೆ ಶೀಘ್ರವೇ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ, 2020-21ರ ಹಣಕಾಸು ವರ್ಷದ ಬಡ್ಡಿ ದರವನ್ನು ದೀಪಾವಳಿಗೆ ಮುಂಚಿತವಾಗಿ ಕ್ರೆಡಿಟ್ ಮಾಡುವ ಅಂದಾಜಿದೆ.
ಇಪಿಎಫ್‌ಒ ತನ್ನ 6 ಕೋಟಿ ಚಂದಾದಾರರಿಗೆ ಶೇ.8.5ರಂತೆ ಬಡ್ಡಿಯನ್ನು ದೀಪಾವಳಿಯ ವೇಳೆಗೆ ಕ್ರೆಡಿಟ್ ಮಾಡಬಹುದು ಎಂಬ ಮಾಹಿತಿ ಇದ್ದು, ಹಣಕಾಸು ಸಚಿವಾಲಯದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
ಕೋವಿಡ್‌ನಿಂದ ಉಂಟಾದ ಆರ್ಥಿಕ ಒತ್ತಡ, ಬೆಲೆ ಏರಿಕೆ, ಇಂಧನ ದರ ಹೆಚ್ಚಳದಿಂದ ಒತ್ತಡದಲ್ಲಿದ್ದಾಗ ಕೇಂದ್ರ ಸರ್ಕಾರಿ ನೌಕರರು ತಮ್ಮ ಡಿಎ ಮತ್ತು ಡಿಎ ರಿಲೀಫ್ ಪಡೆಯುವ ಸಂದರ್ಭದಲ್ಲೇ ನಿವೃತ್ತ ನೌಕರರಿಗೆ ಸಮಾಧಾನಕರ ಸುದ್ದಿ ಇದಾಗಿದೆ.
ಪಾಕಿಸ್ತಾನದಲ್ಲಿ ಮಹಿಳಾ ಎಸ್ಐ ಅಪಹರಿಸಿ ಲೈಂಗಿಕ ಕಿರುಕುಳ
ಮೂಲಗಳ ಪ್ರಕಾರ, ಇಪಿಎಫ್‌ಒನ ಕೇಂದ್ರ ಮಂಡಳಿಯು ಬಡ್ಡಿ ಹೆಚ್ಚಳವನ್ನು ಅನುಮೋದಿಸಿದೆ ಮತ್ತು ಮಂಡಳಿಯು ಈಗ ಹಣಕಾಸು ಸಚಿವಾಲಯದ ಅನುಮೋದನೆಯನ್ನು ಬಯಸಿದೆ.
ಪ್ರೋಟೋಕಾಲ್‌ನಂತೆ ಇಪಿಎಫ್‌ಒ ಹಣಕಾಸು ಸಚಿವಾಲಯದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವ್ಯಾಪಕ ಉದ್ಯೋಗ ನಷ್ಟದಿಂದಾಗಿ ಈ ವರ್ಷದಲ್ಲಿ ಠೇವಣಿಗಳಿಗಿಂತ ಹೆಚ್ಚಿನ ವಿತ್‌ಡ್ರಾಗಳು ಆಗಿವೆ. ಹೀಗಾಗಿ ಇಪಿಎಫ್‌ಒ ಬಡ್ಡಿ ದರವನ್ನು 2021ನೇ ಸಾಲಿಗೆ ಬದಲಿಸಿಲ್ಲ.