ನೌಕರರ ಭವಿಷ್ಯ ನಿಧಿ ಸಂಘಟನೆಯ 6 ಕೋಟಿ ಜನರಿಗೆ ಖುಷಿ ಸುದ್ದಿಯೊಂದಿದೆ. ಜುಲೈನಲ್ಲಿ ಪಿಎಫ್ ಖಾತೆಗೆ ದೊಡ್ಡ ಮೊತ್ತ ಬರಲಿದೆ. 2020-21ರ ಆರ್ಥಿಕ ವರ್ಷದಲ್ಲಿ ಚಂದಾದಾರರ ಖಾತೆಗೆ ಶೇಕಡಾ 8.5ರಷ್ಟು ಬಡ್ಡಿಯನ್ನು ವರ್ಗಾಯಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಕಾರ್ಮಿಕ ಸಚಿವಾಲಯದ ಅನುಮೋದನೆಯ ನಂತರ ಶೇಕಡಾ 8.5ರಷ್ಟು ಬಡ್ಡಿ ಮೊತ್ತವು ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ. ಸಚಿವಾಲಯದ ಅನುಮೋದನೆಯ ನಂತರ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ. ಕಳೆದ 2019-20ರ ಆರ್ಥಿಕ ವರ್ಷದಲ್ಲಿ ಕೆವೈಸಿ ತೊಂದರೆಯಿಂದಾಗಿ ಬಡ್ಡಿ ಪಡೆಯಲು ಪಿಎಫ್ ಖಾತೆದಾರರು ತೊಂದರೆ ಅನುಭವಿಸಿದ್ದರು.
2020-21ರ ಆರ್ಥಿಕ ವರ್ಷದಲ್ಲಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇಕಡಾ 8.5 ರಂತೆ ಬಡ್ಡಿ ನೀಡಲು ಇಪಿಎಫ್‌ಒ ನಿರ್ಧರಿಸಿದೆ. ಇದು ಕಳೆದ 7 ವರ್ಷಗಳಲ್ಲಿ ಕಡಿಮೆ ಬಡ್ಡಿದರವಾಗಿದೆ. ಇದಕ್ಕೂ ಮೊದಲು, 2013 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲಿನ ಬಡ್ಡಿದರಗಳು ಶೇಕಡಾ 8.5ರಷ್ಟಾಗಿತ್ತು.