ಪಿಎಫ್ ಖಾತೆದಾರರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಆಧಾರ್‌ನೊಂದಿಗೆ ಖಾತೆ ಲಿಂಕ್ ಮಾಡುವ ದಿನಾಂಕವನ್ನು ಇಪಿಎಫ್‌ಒ ವಿಸ್ತರಿಸಿದೆ. ಈ ಮೊದಲು, ಇಪಿಎಫ್ಒ, ಖಾತೆ ಜೊತೆ ಆಧಾರ್ ಲಿಂಕ್ ಗೆ ಆಗಸ್ಟ್ 31ನ್ನು ಕೊನೆಯ ದಿನವೆಂದು ಘೋಷಣೆ ಮಾಡಿತ್ತು. ಆದ್ರೀಗ ಈ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ಡಿಸೆಂಬರ್ 31 ರೊಳಗೆ, ಇಪಿಎಫ್‌ಒ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ಖಾತೆಗೆ, ಕಂಪನಿ ನೀಡುವ ಕೊಡುಗೆ ಬರುವುದಿಲ್ಲವೆಂದು ಇಪಿಎಫ್ಒ ಹೇಳಿದೆ. ಅಲ್ಲದೆ, ಖಾತೆದಾರರು, ಖಾತೆಯಲ್ಲಿರುವ ಹಣ ಹಿಂಪಡೆಯಲು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.
ಇಪಿಎಫ್ ಖಾತೆದಾರರ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಲಿಂಕ್ ಮಾಡಲು, ಮೊದಲು ಇಪಿಎಫ್ಒ ಪೋರ್ಟಲ್ epfindia.gov.in ಗೆ ಹೋಗಬೇಕು. ಯುಎಎನ್ ಹಾಗೂ ಪಾಸ್ವರ್ಡ್ ಬಳಸಿ, ಖಾತೆಗೆ ಲಾಗಿನ್ ಆಗಬೇಕು. ನಿರ್ವಹಿಸು ವಿಭಾಗದಲ್ಲಿ ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಆಧಾರ್ ಲಿಂಕ್ ಮಾಡುವ ಆಯ್ಕೆ ಆರಿಸಿ, ಆಧಾರ್ ಕಾರ್ಡ್ ನಲ್ಲಿ ಆಧಾರ್ ಸಂಖ್ಯೆ ಮತ್ತು ಹೆಸರನ್ನು ಟೈಪ್ ಮಾಡುವ ಮೂಲಕ ಸೇವ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮಾಹಿತಿ ಸುರಕ್ಷಿತವಾಗಿರುತ್ತದೆ. ಆಧಾರನ್ನು ಪರಿಶೀಲಿಸಲಾಗುತ್ತದೆ. ಕೆವೈಸಿ ದಾಖಲೆಗಳು ಸರಿಯಾಗಿದ್ದರೆ, ಆಧಾರನ್ನು ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.