ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮೇಲೆ ಉತ್ತಮ ಮೊತ್ತದ ನಿಶ್ಚಿತ ಠೇವಣಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಿತ್ಯವೂ ದೇಶದ ವಿವಿಧ ವಲಯಗಳ ಉದ್ಯೋಗಿಗಳಿಂದ ಒತ್ತಾಯವಿದೆ. ಅದಕ್ಕಾಗಿಯೇ ವಿಶೇಷವಾಗಿ ಯೋಜನೆಯೊಂದನ್ನು ರೂಪಿಸಲಾಗಿದ್ದು, ಸ್ವಂತ ಉದ್ಯೋಗ ಮಾಡುವವರಿಗೆ ಮತ್ತು ಖಾಸಗಿ ಕಂಪನಿಗಳ ನೌಕರರಿಗೆ ಅನುಕೂಲಕರ ಯೋಜನೆ ಹೊರಬಿದ್ದಿದೆ.
ಪ್ರಾಯೋಗಿಕ ಯೋಜನೆಯಾಗಿರುವ ಇದರಲ್ಲಿ ನಿಶ್ಚಿತ ಮೊತ್ತದ ಪಿಂಚಣಿಯು ಉದ್ಯೋಗಿಗಳಿಗೆ ಇಂತಿಷ್ಟು ವರ್ಷಗಳ ಪ್ರೀಮಿಯಂ ಪಾವತಿ ಬಳಿಕ ಸಿಗಲು ಆರಂಭವಾಗಲಿದೆ. ಮೊದಲು ನೋಂದಣಿ ವೇಳೆ ಉದ್ಯೋಗಿಗೆ ಇರುವ ಸಂಬಳ ಹಾಗೂ ಬಾಕಿ ಉಳಿದಿರುವ ನೌಕರಿಯ ಅವಧಿಯನ್ನು ಲೆಕ್ಕ ಹಾಕುವ ಮುಖಾಂತರ ನಿಶ್ಚಿತ ಪಿಂಚಣಿಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್ ಮರುಸೃಷ್ಟಿಸಿದ ಕೊರಿಯನ್ ಮಹಿಳೆ
ಸದ್ಯದ ಮಟ್ಟಿಗೆ 1995ರ ನೌಕರರ ಪಿಂಚಣಿ ಯೋಜನೆ ಅಡಿಯಲ್ಲಿ ಇಪಿಎಫ್‌ಒ ಸಂಸ್ಥೆಯು ಪಿಂಚಣಿ ಮೊತ್ತವನ್ನು ತೆರಿಗೆ ಹೊರೆಯಿಂದ ಹೊರಗಡೆ ಇರಿಸಿದೆ. ಆದರೆ, ಅದಕ್ಕೆ ಅನುಗುಣವಾಗಿ ಪಿಂಚಣಿ ಮೊತ್ತ ಸಿಗುವುದು ಕೂಡ ಬಹಳ ಕಡಿಮೆ ಇದೆ. ಮಾಸಿಕ 1250 ರೂ. ಮಾತ್ರವೇ ಸೀಮಿತ ಮೊತ್ತದ ಪಿಂಚಣಿ ಸಿಗಲಿದೆ. ಈ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಈ ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಕೂಡ.
ನಿವೃತ್ತಿ ಜೀವನಕ್ಕೆ ಹೆಚ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಸಂಸ್ಥೆಯು ಉದ್ಯೋಗಸ್ಥರಿಗೆ ಹೆಚ್ಚೆಚ್ಚು ಉಳಿತಾಯ ಮಾಡುವ ಹೊಸ ಯೋಜನೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಕ್ಕೆ ಇರಿಸುವ ಮೂಲಕ ಜಾರಿಗೆ ತರಬೇಕು. ಆಗ ನೌಕರರಿಗೆ ನಿವೃತ್ತಿ ಜೀವನದ ಬಗ್ಗೆ ಅಭದ್ರತೆಯು ಕಾಡುವುದಿಲ್ಲ ಎನ್ನುವುದು ಬಹುತೇಕರ ವಾದವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅನ್ವಯ ಮೂಲ ವೇತನದ 12% ಮೊತ್ತವು ಪಿಎಫ್ (ಪಿಂಚಣಿ) ಎಂದು ಪರಿಗಣಿಸಲಾಗುತ್ತದೆ. ಉದ್ಯೋಗಿಯ ವೇತನದಿಂದ ಎಷ್ಟು ಪಿಎಫ್ ಮೊತ್ತ ಕಡಿತಗೊಳ್ಳುತ್ತದೆಯೋ, ಅಷ್ಟೇ ಮೊತ್ತವು ಕಂಪನಿ ಅಥವಾ ಉದ್ಯೋಗ ನೀಡಿದವರು ಕೂಡ ಜಮೆ ಮಾಡಬೇಕು.
ಆದರೆ, ಕಂಪನಿ ಅಥವಾ ಉದ್ಯೋಗಿಯು ಪಾವತಿ ಮಾಡುವ ಮೊತ್ತದ ಸ್ವಲ್ಪ ಭಾಗವನ್ನು ನಿವೃತ್ತ ಜೀವನ ಪಿಂಚಣಿಯಾಗಿ ಪರಿಗಣಿಸಲಾಗುತ್ತದೆ.
ಅಂದರೆ ಮೂಲವೇತನದ 8.33% ನಿವೃತ್ತಿ ಜೀವನದ ಮಾಸಿಕ ಪಿಂಚಣಿ ಎಂದು ಪರಿಗಣಿಸಲಾಗುತ್ತಿದೆ.