ಇಪಿಎಫ್ಒ 6 ಕೋಟಿ ಖಾತೆದಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಇಪಿಎಫ್ಒ, ಪಿಎಫ್ ಖಾತೆದಾರರಿಗೆ ಭರ್ಜರಿ ಉಡುಗೊರೆ ನೀಡಲಿದೆ. ಬಡ್ಡಿ ಮೊತ್ತವನ್ನು ಶೀಘ್ರವೇ ಪಿಎಫ್ ಖಾತೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ
2020-2021ರ ಬಡ್ಡಿಯನ್ನು ಪಿಎಫ್ ಖಾತೆದಾರರ ಖಾತೆಗೆ ವರ್ಗಾಯಿಸಲಿದೆ. ಶೇಕಡಾ 8.5 ರಷ್ಟು ಬಡ್ಡಿಯನ್ನು ಚಂದಾದಾರರ ಖಾತೆಗೆ ವರ್ಗಾಯಿಸಲು ಸರ್ಕಾರ ಈಗಾಗಲೇ ಹಸಿರು ನಿಶಾನೆ ನೀಡಿದೆ. ಪಿಎಫ್ ಖಾತೆದಾರರಿಗೆ ಈ ವರ್ಷ ಶೇಕಡಾ 8.5ರಷ್ಟು ಬಡ್ಡಿ ಸಿಗಲಿದೆ. ಹಿಂದಿನ ವರ್ಷವೂ ಇಷ್ಟೇ ಬಡ್ಡಿ ನೀಡಲಾಗಿತ್ತು. ಈ ಬಡ್ಡಿ ದರವು ಕಳೆದ 7 ವರ್ಷಗಳಲ್ಲಿ ಅತ್ಯಂತ ಕಡಿಮೆ. 2019ರಲ್ಲಿ ಇಪಿಎಫ್ ಬಡ್ಡಿ ದರ ಶೇಕಡಾ 8.65ರಷ್ಟಿತ್ತು. 2018 ರಲ್ಲಿ ಶೇಕಡಾ 8.55ರಷ್ಟು ಬಡ್ಡಿ ಸಿಗ್ತಿತ್ತು.
ಇಪಿಎಫ್ಒ, ಖಾತೆದಾರರಿಗೆ ಎಚ್ಚರಿಕೆ ಸಂದೇಶವನ್ನೂ ರವಾನೆ ಮಾಡಿದೆ. ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇಪಿಎಫ್ಒ, ನಕಲಿ ಕರೆಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಯಾವುದೇ ನಕಲಿ ಅಪ್ಲಿಕೇಷನ್ ಡೌನ್ಲೋಡ್ ಮಾಡಬೇಡಿ. ಇಪಿಎಫ್ಒ, ಯುಎಎನ್ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ. ಹಾಗಾಗಿ ಫೋನ್ ನಲ್ಲಿ ಯಾವುದೇ ಕಾರಣಕ್ಕೂ ಈ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ.