ಪಿಂಚಣಿ ಸಂಬಂಧಿತ ಹಲವು ಸೌಲಭ್ಯಗಳನ್ನು ಅನುಭವಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಅವಕಾಶ ಮಾಡಿಕೊಟ್ಟಿದೆ. ಆದರೆ, ನಿವೃತ್ತ ನೌಕರರು ಅಂದರೆ ಹಿರಿಯ ನಾಗರಿಕರು ಸಮೀಪದಲ್ಲಿನ ಇಪಿಎಫ್‌ಒ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪ್ರಮಾಣೀಕರಣ (ಬೆರಳಚ್ಚು ಪ್ರಮಾಣೀಕರಣ) ಮಾಡಿಸುವುದು ಕಡ್ಡಾಯವಾಗಿದೆ. ಇದು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಬಹಳ ಮುಖ್ಯ.
ನಿವೃತ್ತ ನೌಕರರ ಹೆಸರಲ್ಲಿ ಬೇರೆಯವರು ಸಹಿ ಮಾಡುವುದು, ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ನುಂಗುವುದನ್ನು ತಡೆಯಲು ಡಿಜಿಟಲ್ ಪ್ರಮಾಣಪತ್ರಗಳನ್ನು ಕೇಂದ್ರ ಸರಕಾರವು ಜಾರಿಗೆ ತಂದಿದೆ. ಪಿಂಚಣಿ ಸೌಲಭ್ಯ ಒದಗಿಸುವ ಕೆಲವು ಬ್ಯಾಂಕ್‌ಗಳಲ್ಲಿ ಕೂಡ ಬಯೊಮೆಟ್ರಿಕ್ ಪ್ರಮಾಣೀಕರಣಕ್ಕೆ ಅವಕಾಶ ಇರುತ್ತದೆ. ಅದಲ್ಲದೇ ’’ಉಮಂಗ್’’ ಮೊಬೈಲ್ ಆ್ಯಪ್‌ನಲ್ಲಿ ಕೂಡ ಮಾಡಬಹುದು. ಇಲ್ಲವೇ ಸಾಮಾನ್ಯ ನಾಗರಿಕ ಸೇವಾ ಕೆಂದ್ರಗಳು, ನಿಗದಿತ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಕೂಡ ಡಿಜಿಟಲ್ ಲೈಫ್ ಸರ್ಟಿಫಿಕೇಟ್ಸ್‌ಗೆ ಬಯೊಮೆಟ್ರಿಕ್ ಪ್ರಮಾಣೀಕರಣ ಮಾಡಿಸಬಹುದಾಗಿದೆ.
ಎಲ್ಲಾ PF ಖಾತೆದಾರರಿಗೆ EPFO ಮುಖ್ಯ ಮಾಹಿತಿ
ಈ ಡಿಜಿಟಲ್ ಲೈಫ್ ಪ್ರಮಾಣಪತ್ರಗಳ ಸಿಂಧುತ್ವ ಕೇವಲ 1 ವರ್ಷ ಮಾತ್ರ. ಬಳಿಕ ಪುನಃ ಪ್ರಮಾಣೀಕರಣ ಮಾಡಿಸಬೇಕು. ’’ ಜೀವನ್ ಪ್ರಮಾಣ್ ’’(ಡಿಎಲ್‌ಸಿ) ಎಂದು ಕರೆಯಲಾಗುವ ಬಯೊಮೆಟ್ರಿಕ್ ಮೂಲದ ಆಧಾರ್ ಸಂಖ್ಯೆ ಆಧರಿತ ಡಿಜಿಟಲ್ ಲೈಫ್ ಪ್ರಮಾಣಪತ್ರವು ಪ್ರತಿ ಪಿಂಚಣಿದಾರರಿಗೂ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದಕ್ಕೆ ನೋಂದಾಯಿತ ಮೊಬೈಲ್ ಸಂಖ್ಯೆಯಿರುವ ಫೋನ್‌ವೊಂದನ್ನು ಸೇವಾ ಕೇಂದ್ರಕ್ಕೆ ಒಯ್ಯುವುದು ಮುಖ್ಯ. ಯಾಕೆಂದರೆ ಒಟಿಪಿ ನಂಬರ್ ನೀಡಬೇಕಾಗುತ್ತದೆ.