ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(The Employees’ Provident Fund Organisation -EPFO) 2023-24 ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇ. 8.25ಕ್ಕೆ ಮೂರು ವರ್ಷಗಳ ಹೆಚ್ಚಿನ ಬಡ್ಡಿ ದರವನ್ನು ನಿಗದಿಪಡಿಸಿದೆ.
ನವದೆಹಲಿಯಲ್ಲಿ ನಡೆದ ಕೇಂದ್ರೀಯ ಟ್ರಸ್ಟಿಗಳ ಇಪಿಎಫ್‌ಒನ 235 ನೇ ಸಭೆಯಲ್ಲಿ ಇಪಿಎಫ್‌ಒದ ಉನ್ನತ ನಿರ್ಧಾರ ಸಂಸ್ಥೆ ಇಂದು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್, ಭಾರತದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ಈಡೇರಿಸುವತ್ತ ಈ ಕ್ರಮವು ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
2023 ರಲ್ಲಿ ಶೇಕಡ 8.15 ರಷ್ಟು, 2022ರಲ್ಲಿ ಶೇಕಡ 8.1 ರಷ್ಟು ಬಡ್ಡಿ ದರವನ್ನು ಪಿಎಫ್ ಚಂದಾದಾರರ ಖಾತೆಗೆ ಜಮಾ ಮಾಡಲಾಗಿತ್ತು.