ಸರ್ಕಾರಿ ಸ್ವಾಮ್ಯದ ಉಳಿತಾಯ ಯೋಜನೆ ನೀಡುತ್ತಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವ್ಯಾಪ್ತಿಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಡಿಸೆಂಬರ್ 2021ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಡಿಸೆಂಬರ್‌ಲ್ಲಿ ಸೇರ್ಪಡೆಯಾದ ಒಟ್ಟು 14.60 ಲಕ್ಷ ಚಂದಾದಾರರಲ್ಲಿ, 9.11 ಲಕ್ಷ ಹೊಸ ಸದಸ್ಯರನ್ನು ಮೊದಲ ಬಾರಿಗೆ ಎಪಿಎಫ್ ಮತ್ತು ಎಂಪಿ ಕಾಯಿದೆ, 1952 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ
ಫೇಸ್ಬುಕ್ ನಲ್ಲಿ ಕಮೆಂಟ್ ಹಾಕಿದ್ದಕ್ಕೆ ಜಗಳ, ಮಾರಣಾಂತಿಕ ಹಲ್ಲೆ ನಡೆಸಿ ಯುವಕನಿಗೆ ಚೂರಿ ಇರಿತ
2021ರ ನವೆಂಬರ್‌ನ ಅಂಕಿಸಂಖ್ಯೆಗೆ ಹೋಲಿಸಿದರೆ , ಡಿಸೆಂಬರ್‌ನಲ್ಲಿ ಚಂದಾದಾರರ ಸೇರ್ಪಡೆ ಶೇಕಡಾ 19.98 ರಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ವ್ಯಾಪ್ತಿಗೆ ಬಂದವರು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 16.4 ಶೇಕಡಾ ಹೆಚ್ಚಳವಾಗಿದೆ. ಕಳೆದ ವರ್ಷ 12.54 ಲಕ್ಷ ಮಂದಿ ಈ ವ್ಯಾಪ್ತಿಗೆ ಬಂದಿದ್ದರು.
ಸರಿಸುಮಾರು 5.49 ಲಕ್ಷ ನೋಂದಾಯಿತರು ನಿರ್ಗಮಿಸಿದ್ದಾರೆ. ಆದರೆ ಹಿಂಪಡೆಯುವಿಕೆಯನ್ನು ಆಯ್ಕೆ ಕೊನೆಯ ಬದಲು ತಮ್ಮ ಭವಿಷ್ಯನಿಧಿ ಮೊತ್ತವನ್ನು ಇಪಿಎಫ್ಒ ನೊಂದಿಗೆ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಜುಲೈ, 2021 ರಿಂದ ಇಪಿಎಫ್ಒನಿಂದ ನಿಂದ ನಿರ್ಗಮಿಸುವ ಸದಸ್ಯರ ಸಂಖ್ಯೆಯು ಇಳಿಮುಖವಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಮಾಹಿತಿ ಪ್ರಕಾರ 22-25 ವರ್ಷ ವಯಸ್ಸಿನವರು ಡಿಸೆಂಬರ್ 2021ರಲ್ಲಿ 3.87 ಲಕ್ಷ ಮಂದಿ ಸೇರ್ಪಡೆಗಳೊಂದಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗಿದ್ದಾರೆ.