ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆದ್ರೆ ಕೆಲ ಜನರಿಗೆ ಪಿಎಫ್ ಖಾತೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಇಪಿಎಫ್ಒನ ಹೊಸ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಖಾತೆದಾರರು ಪಿಎಫ್ ಖಾತೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ನಿಯಮವು ಸೆಪ್ಟೆಂಬರ್ 1, 2021 ರಿಂದ ಜಾರಿಗೆ ಬರಲಿದೆ. ಮೊದಲು ಇದನ್ನು ಜೂನ್ 1 ರಿಂದ ಜಾರಿಗೆ ತರಲಾಗುತ್ತಿತ್ತು. ಆದರೆ ಈಗ ಅದರ ಗಡುವು ವಿಸ್ತರಿಸಲಾಗಿದೆ. ಆಗಸ್ಟ್ 31 ರೊಳಗೆ, ಪಿಎಫ್ ಖಾತೆಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು.
ನಿಮ್ಮ ‘ಆಧಾರ್’ ನೀಡಿ ಖರೀದಿಸಿರುವ ಸಿಮ್ ಕಾರ್ಡ್ ಗಳೆಷ್ಟು…? ಇಲ್ಲಿದೆ ತಿಳಿದುಕೊಳ್ಳುವ ವಿಧಾನ
ಒಂದು ವೇಳೆ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ಪಿಎಫ್ ಖಾತೆಗೆ ಬರುವ ಹಣ ನಿಲ್ಲಲಿದೆ. ಎಲೆಕ್ಟ್ರಾನಿಕ್ ಚಲನ್ ಮತ್ತು ರಿಟರ್ನ್ ಸಾಧ್ಯವಿಲ್ಲ. ಇಪಿಎಫ್ಒ, ಆಧಾರನ್ನು ಸಾಮಾಜಿಕ ಭದ್ರತೆ ಕೋಡ್ 2020 ರ ಅಡಿಯಲ್ಲಿ ಲಿಂಕ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು.
ಪಿಎಫ್ ಖಾತೆಯನ್ನು ಸುಲಭವಾಗಿ ಆಧಾರ್ ಗೆ ಲಿಂಕ್ ಮಾಡಬಹುದು. ಮೊದಲು ಇಪಿಎಫ್ಒ ವೆಬ್ಸೈಟ್ಗೆ ಹೋಗಬೇಕು. https://unifiedportal-mem.epfindia.gov.in/memberinterface/ ಲಿಂಕ್ ಕ್ಲಿಕ್ ಮಾಡಬೇಕು. ನಂತ್ರ ಯುಎಎನ್ ಮತ್ತು ಪಾಸ್ವರ್ಡ್ ಖಾತೆಗೆ ಲಾಗಿನ್ ಆಗ್ಬೇಕು.
ನಂತ್ರ ಮ್ಯಾನೇಜ್ ಆಯ್ಕೆಗೆ ಹೋಗಿ ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆಯುತ್ತದೆ. ಅಲ್ಲಿ ಕೆಲ ದಾಖಲೆಗಳನ್ನು ನಮೂದಿಸಬೇಕು. ನಂತ್ರ ಆಧಾರ್ ಆಯ್ಕೆಯನ್ನು ಆರಿಸಬೇಕು. ನಂತ್ರ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡುವ ಮೂಲಕ ಸೇವೆಯ ಮೇಲೆ ಕ್ಲಿಕ್ ಮಾಡಬೇಕು. ಕೆವೈಸಿ ದಾಖಲೆಗಳು ಸರಿಯಾಗಿದ್ದರೆ, ಆಧಾರನ್ನು ಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.