ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ‘ಸಂಭವಾಮಿ ಯುಗೆ ಯುಗೆ’ ಚಿತ್ರದ ”ಏನು ಪಡೆಯದೆ” ಎಂಬ ಹಾಡೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಹರ್ಷಿಕ ದೇವನಾಥ್ ಧ್ವನಿಯಾಗಿದ್ದು, ಪುರಾಣ್ ಶೆಟ್ಟಿಗಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಡಾ. ಉಮೇಶ್ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಜೈ ಶೆಟ್ಟಿ, ಸೇರಿದಂತೆ ಸುಧಾರಾಣಿ, ಪ್ರಮೋದ್ ಶೆಟ್ಟಿ, ಭವ್ಯ, ಅಶೋಕ್ ಕುಮಾರ್, ನಿಶಾ ರಜಪೂತ್, ಮಧುರಾ ಗೌಡ, ಮತ್ತು ಅಭಯ್ ಪುನಿತ್ ಬಣ್ಣ ಹಚ್ಚಿದ್ದು, ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಿದ್ದಾರೆ. ರವೀಶ್ ಆತ್ಮರಾಮ್ ಸಂಕಲನ, ಗೀತಾ ನೃತ್ಯ ನಿರ್ದೇಶನ, ರಾಜು ಹೆಮ್ಮಿಗೆಪುರ ಛಾಯಾಗ್ರಾಹಣವಿದೆ.