ಭರತ್ ವರ್ಷ್ ನಿರ್ದೇಶನದ ಶಶಿ ರಾಜ್ ಅಭಿನಯದ ‘ಇಂಟರ್ವಲ್’ ಚಿತ್ರದ ‘ಏನೋ ಶುರುವಾಗಿದೆ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಸುನಿಧಿ ಗಣೇಶ್ ಹಾಗೂ ಸಿದ್ದಾರ್ಥ ಬೆಲ್ ಮಣ್ಣು ಧ್ವನಿಯಾಗಿದ್ದು, ವಿಕಾಸ್ ವಶಿಷ್ಠ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಶಶಿ ರಾಜ್ ಸೇರಿದಂತೆ ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚಾರಿತ್ರ ರಾವ್, ಸಹನಾ ಆರಾಧ್ಯ ಮತ್ತು ರಂಗನಾಥ್ ಶಿವಮೊಗ್ಗ ತೆರೆ ಹಂಚಿಕೊಂಡಿದ್ದು, ಶಶಿಧರ್ ಪುಟ್ಟೇಗೌಡ ಸಂಕಲನ, ಸುಕಿ ಅವರ ಸಂಭಾಷಣೆ ರಾಜ್ ಕಾಂತ್ ಛಾಯಾಗ್ರಹಣ ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ರಘು ಮಾಸ್ಟರ್ ನೃತ್ಯ ನಿರ್ದೇಶನವಿದೆ. ಭರತ್ ವರ್ಷ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.