ಮತ್ತೊಮ್ಮೆ, ಸನ್ಬರ್ನ್ ಉತ್ಸವವು ಭಾರಿ ವಿವಾದಕ್ಕೆ ಕಾರಣವಾಗಿದೆ. ಡಿಸೆಂಬರ್ 28 ರಿಂದ 31 ರವರೆಗೆ ಗೋವಾದಲ್ಲಿ ನಡೆದ ಉತ್ಸವದಲ್ಲಿ ಸಂಘಟಕರು ಶಿವನ ಚಿತ್ರವನ್ನು ಅನುಚಿತವಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋವಾದಲ್ಲಿ ಆಯೋಜಿಸಲಾಗಿದ್ದ ಸನ್ಬರ್ನ್ ಫೆಸ್ಟಿವಲ್ ಉತ್ಸವದಲ್ಲಿ ಶಿವನ ಚಿತ್ರಗಳನ್ನು ಅವಹೇಳನಕಾರಿ ರೀತಿಯಲ್ಲಿ ಬಳಸಲಾಗಿದೆ ಜನರು ಎಣ್ಣೆ ಪಾರ್ಟಿ ಮಾಡಿ ಮಾಡಿ, ದೊಡ್ಡದಾಗಿ ಮ್ಯೂಸಿಕ್ ಹಾಕಿ ನೃತ್ಯ ಮಾಡಿದ್ದಾರೆ ಮತ್ತು ಇಡಿಎಂ ಉತ್ಸವದಲ್ಲಿ ಪರದೆಯ ಮೇಲೆ ಶಿವನ ಚಿತ್ರಗಳನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳಲಾಗಿದೆ , ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಗೋವಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅಮಿತ್ ಪಾಳೇಕರ್ ಟ್ವೀಟ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.