ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 2 ಕಪ್, ಕಾಯಿತುರಿ- 1 ಕಪ್, ಈರುಳ್ಳಿ-4, ಹಸಿಮೆಣಸಿನಕಾಯಿ-4, ಶುಂಠಿ-ಸ್ವಲ್ಪ, ಕರಿಬೇವುಸೊಪ್ಪು- ಸ್ವಲ್ಪ
ಮಾಡುವ ವಿಧಾನ: 3 ಈರುಳ್ಳಿ, 3 ಹಸಿಮೆಣಸಿನಕಾಯಿ, ಶುಂಠಿ, ಕರಿಬೇವುಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ, ನಂತರ 2 ಗಂಟೆ ನೆನೆಸಿಟ್ಟ ದೋಸೆ ಅಕ್ಕಿ, 1 ಕಪ್ ಕಾಯಿತುರಿ, 1 ಈರುಳ್ಳಿ, 1 ಮೆಣಸಿನಕಾಯಿ ಸೇರಿಸಿ ರುಬ್ಬಿಕೊಳ್ಳಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದರೆ ನೀರು ಸೇರಿಸಿ ರುಬ್ಬಿಕೊಳ್ಳಿ. ಆದರೆ ಹಿಟ್ಟು ಗಟ್ಟಿಯಾಗಿರಬೇಕು.
ನಂತರ ಈ ಹಿಟ್ಟಿಗೆ ಹೆಚ್ಚಿಟ್ಟ ಈರುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಕರಿಬೇವುಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ಟೌವ್ ಮೇಲಿಡಿ. ಹಿಟ್ಟನ್ನು ಉಂಡೆ ಮಾಡಿ ವಡೆ ತರಹ ಕೈಯಲ್ಲೇ ತಟ್ಟಿ ಕಾದ ಎಣ್ಣೆಗೆ ಬಿಡಿ. ಕಂದು ಬಣ್ಣ ಬಂದಾಗ ಸರ್ವಿಂಗ್ ಪ್ಲೇಟ್ ಗೆ ಹಾಕಿಟ್ಟರೆ ಸವಿಯಲು ಈರುಳ್ಳಿ ವಡಾ ರೆಡಿ.