ಬೇಕಾಗುವ ಸಾಮಾಗ್ರಿಗಳು:
ಕಡ್ಲೇಬೇಳೆ – 2ಕಪ್, ಉದ್ದಿನಬೇಳೆ – 1/4ಕಪ್, ಈರುಳ್ಳಿ – 2, ಹಸಿಮೆಣಸು – 3 ರಿಂದ 4, ಶುಂಠಿ – ಸ್ವಲ್ಪ, ಕರಿಬೇವುಸೊಪ್ಪು – ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
2 ಕಪ್ ಕಡ್ಲೇಬೇಳೆ ಹಾಗೂ ¼ ಕಪ್ ಉದ್ದಿನಬೇಳೆಯನ್ನು 3 ರಿಂದ 4 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಇದನ್ನು ಪಾತ್ರೆಗೆ ಸೋಸಿ. ಬಳಿಕ ಮಿಕ್ಸಿ ಜಾರಿನಲ್ಲಿ ಒಂದೆರಡು ಸುತ್ತು ತಿರುಗಿಸಿ. ನುಣ್ಣಗೆ ರುಬ್ಬಬೇಡಿ. ಯಾವುದೇ ಕಾರಣಕ್ಕೂ ನೀರು ಸೇರಿಸಬೇಡಿ. ಬಳಿಕ ಇದಕ್ಕೆ ಹೆಚ್ಚಿಟ್ಟ ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವುಸೊಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ. ಕೆಂಪಾಗಿ ಗರಿಗರಿಯಾಗಿದ್ದರೆ ಮಸಾಲಾ ವಡೆ ರೆಡಿಯಾಗಿದೆ. ಇದನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿದರೆ ಬಿಸಿ ಬಿಸಿ ಚಹಾ ಜೊತೆ ಸವಿಯಲು ಮಸಾಲಾ ವಡಾ ರೆಡಿ.