ಅವಲಕ್ಕಿ ಚೂಡಾ ಉತ್ತರ ಕರ್ನಾಟಕದ ಕಡೆ ಫೇಮಸ್ ಕುರುಕಲು ತಿಂಡಿಗಳಲ್ಲಿ ಒಂದು. ಅವಲಕ್ಕಿ ಚೂಡಾ ಬೇರೆ ಯಾವುದೇ ಕುರುಕು ತಿಂಡಿಗಿಂತ ದುಪ್ಪಟ್ಟು ಒಳ್ಳೆಯದು. ಅವಲಕ್ಕಿ ವಿಶೇಷವಾಗಿ ಎಲ್ಲಾ ವಯೋಮಾನದವರು ತಿನ್ನಲು ಇಷ್ಟಪಡುವ ಖಾದ್ಯ.
ಚೂಡಾ ಮಾಡಲು ಬೇಕಾದ ಪದಾರ್ಥಗಳು
ತೆಳು ಅವಲಕ್ಕಿ – ಒಂದು ಕಪ್
ಒಣ ಕೊಬ್ಬರಿ ಚೂರು – ಒಂದು ಹಿಡಿ
ಕಡಲೆ ಬೀಜ – ಒಂದು ಹಿಡಿ
ಹುರಿಗಡಲೆ – ಒಂದು ಹಿಡಿ
ಒಣ ಮೆಣಸಿನಕಾಯಿ – 4-5
ಕರಿಬೇವು – ಸ್ವಲ್ಪ
ಅರಿಶಿಣ – ಅರ್ಧ ಚಮಚ
ಸಕ್ಕರೆ – ಒಂದು ಚಮಚ
ಉಪ್ಪು – ರುಚಿಗೆ
ಚೂಡಾ ಮಾಡುವ ವಿಧಾನ
ಕಡಲೆ ಕಾಯಿ, ಹುರಿಗಡಲೆ, ಒಣ ಕೊಬ್ಬರಿ ಇವುಗಳನ್ನು ಪ್ರತ್ಯೇಕವಾಗಿ ಫ್ರೈ ಮಾಡಿಟ್ಟುಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಅರಿಶಿನ ಹಾಗೂ ಸಕ್ಕರೆ ಸೇರಿಸಿ ಕೊನೆಯದಾಗಿ ಅವಲಕ್ಕಿ ಮತ್ತು ಈಗಾಗಲೇ ಫ್ರೈ ಮಾಡಿಟ್ಟುಕೊಂಡ ಪದಾರ್ಥಗಳನ್ನು ಬೆರೆಸಿ ಮಂದ ಉರಿಯಲ್ಲಿ 5 ನಿಮಿಷಗಳವರೆಗೆ ಮಿಕ್ಸ್ ಮಾಡಿ. ಮಿಶ್ರಣ ಗರಿಗರಿ ಆದಾಗ ಕೆಳಗಿಳಿಸಿ. ಚಹಾ ಹಾಗೂ ಕಾಫಿ ಜೊತೆಗೆ ಸವಿಯಿರಿ.