
ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.
ಈರುಳ್ಳಿ ರಸಕ್ಕೆ ನಿಂಬೆ ರಸ ಮತ್ತು ಮೊಸರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮದ ಕಾಯಿಲೆಯಿಂದ ದೂರವಿರಬಹುದು. ಈರುಳ್ಳಿಯಲ್ಲಿ ಎ, ಇ, ಸಿನಂತಹ ವಿಟಮಿನ್ ಗಳು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಹಾನಿ ಮಾಡುವಂತಹ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಈರುಳ್ಳಿ ಚರ್ಮದಲ್ಲಿರುವ ಕಲ್ಮಷವನ್ನು ತೆಗೆದು ಹಾಕುತ್ತದೆ, ಮತ್ತು ಚರ್ಮದ ಸೋಂಕಿನ ವಿರುದ್ಧ ಹೋರಾಡುತ್ತದೆ.
ಹಾಗೇ ಇದು ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಈರುಳ್ಳಿ ಆರೋಗ್ಯಕರ ಚರ್ಮದ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಚರ್ಮ ಒಡೆಯುವುದನ್ನು ತಡೆಯುತ್ತದೆ.