ವರ್ಕ್ ಫ್ರಂ ಹೋಂ ಆಯ್ಕೆ ಆರಂಭವಾದ ಬಳಿಕ ಮಹಿಳೆಯರಿಗೆ ಮನೆಯಲ್ಲೇ ಸಮಯ ಕಳೆಯಲು ಹೆಚ್ಚಿನ ಟೈಂ ಸಿಗುತ್ತಿದೆ ಎಂಬುದಂತೂ ಸತ್ಯ. ಹೀಗಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವಷ್ಟು ಬ್ಯೂಟಿ ಟಿಪ್ಸ್ ಗಳ ಬಗ್ಗೆ ತಿಳಿಯೋಣ ಬನ್ನಿ.
ಬ್ಲ್ಯಾಕ್ ಹೆಡ್ ನಿವಾರಣೆ ಮಾಡಬೇಕಾದರೆ ಹೀಗೆ ಮಾಡಿ. ಜೇನುತುಪ್ಪಕ್ಕೆ ದಾಲ್ಚಿನಿ ಪುಡಿ ಬೆರೆಸಿ ಬ್ಲ್ಯಾಕ್ ಹೆಡ್ ಮೇಲೆ ಹಚ್ಚಿ. ಹತ್ತು ನಿಮಿಷ ಬಳಿಕ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡಿದರೆ ಬ್ಲ್ಯಾಕ್ ಹೆಡ್ ಮಾಯವಾಗುತ್ತದೆ.
ನಿಮ್ಮ ತ್ವಚೆ ಕಳೆಗುಂದಿದೆಯೇ, ಹಾಗಿದ್ದರೆ ಆ್ಯಪಲ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಪೇಸ್ ಪ್ಯಾಕ್ ಮಾಡಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಬಾಳೆಹಣ್ಣು ಹಾಗೂ ದ್ರಾಕ್ಷಿಯ ಮಾಸ್ಕ್ ಮಾಡಿಕೊಂಡರೂ ಒಳ್ಳೆಯದು.
ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಾಣಿಸಿಕೊಂಡಿದ್ದರೆ ಆಲೂಗಡ್ಡೆ ಪೇಸ್ಟ್ ಹಾಕಿ, 15 ನಿಮಿಷ ಬಳಿಕ ಮುಖ ತೊಳೆಯಿರಿ. ಗುಲಾಬಿ ಬಣ್ಣದ ಆಕರ್ಷಕ ತುಟಿಗಳು ನಿಮ್ಮದಾಗಬೇಕಿದ್ದರೆ ದಾಲ್ಚಿನಿ ಹಾಗೂ ಆಲಿವ್ ಆಯಿಲ್ ನಿಂದ ಸ್ಕ್ರಬ್ ಮಾಡಿ. ಡ್ರೈ ಸ್ಕ್ರಿನ್ ಇರುವವರು ಹಾಲಿನ ಕೆನೆ ಹಾಗೂ ಮೊಸರಿನ ಮಾಸ್ಕ್ ಹಾಕಿಕೊಳ್ಳಿ.