ಸೇಬು ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಸೇಬು ಹಣ್ಣಿನ ಸಿಪ್ಪೆಯಿಂದ ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹಾಗಾಗಿ ಸೇಬು ಹಣ್ಣಿನ ಸಿಪ್ಪೆಯಿಂದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.
*ಸೇಬುವಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದರಲ್ಲಿ 1 ಚಮಚ ಪೌಡರ್ ನ್ನು 1 ಚಮಚ ಜೇನುತುಪ್ಪ ಮತ್ತು 1 ಚಮಚ ರೋಸ್ ವಾಟರ್ ಜೊತೆಗೆ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛ ಮಾಡಿ. ಇದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ.
*1 ಚಮಚ ಸೇಬು ಸಿಪ್ಪೆಯ ಪುಡಿಗೆ 1 ಚಮಚ ಟೊಮೆಟೊ ಪೇಸ್ಟ್ , 1 ಚಮಚ ಅಲೋವೆರಾ ಜೆಲ್ ನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ಮುಖವನ್ನು ಸ್ವಚ್ಚ ಮಾಡಿ. ಇದರಿಂದ ಜೋತುಬಿದ್ದ ಚರ್ಮ ಬಿಗಿಯಾಗುತ್ತದೆ.